ಮಂಗಳೂರು: ಮಹಿಳೆಗೆ ಕಿರುಕುಳ ಆರೋಪ; ವ್ಯಕ್ತಿಗೆ ಹಲ್ಲೆ ನಡೆಸಿದ ಹಿಂದುತ್ವ ಸಂಘಟನೆ!?
ಮಂಗಳೂರು:
ಬಸ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ಕಿರುಕುಳ ಆರೋಪ ಹೊರಿಸಿ ಭಿನ್ನ ಕೋಮಿನ ವ್ಯಕ್ತಿಯೋರ್ವರಿಗೆ
ಸಂಘ ಪರಿವಾರದ ಕಾರ್ಯಕರ್ತರು ಎನ್ನಲಾದ ತಂಡವೊಂದು ಬಂಟ್ವಾಳ ರಾಯಿಯಲ್ಲಿ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ
ವೀಡಿಯೋ ವೈರಲ್ ಮಾಡಲಾಗಿದ್ದು, ಅದರಲ್ಲಿ ಹಲ್ಲೆಗೊಳಗಾದ ವ್ಯಕ್ತಿ ತನ್ನ ಮೇಲಾದ ದೌರ್ಜನ್ಯವನ್ನ ಬಿಚ್ಚಿಟ್ಟಿದ್ದಾರೆ.
ಹಲ್ಲೆಯಿಂದ ಅವರ ಬೆನ್ನು, ಮುಖ ಹಾಗೂ ಕಣ್ಣುಗಳಿಗೆ ಗಾಯವಾಗಿರುವುದು ತಿಳಿದು ಬರುತ್ತದೆ.
ಮುಲ್ಲರಪಟ್ಣ
ನಿವಾಸಿಯಾಗಿರುವ ಇವರು ಕೂಲಿ ಕಾರ್ಮಿಕನಾಗಿದ್ದು, ಬಂಟ್ವಾಳದಿಂದ ಮೂಡಬಿದ್ರಿಗೆ ಮೇಸ್ತ್ರಿ ಕೆಲಸಕ್ಕೆ
ಹೋಗುತ್ತಿದ್ದರು ಎನ್ನಲಾಗಿದೆ. ಬಸ್ಸಿನಲ್ಲಿ ಜನ ರಶ್ ಇದ್ದಿದ್ದರಿಂದ ಮಹಿಳೆಯೊಬ್ಬರ ಬ್ಯಾಗ್ ಈ ವ್ಯಕ್ತಿಯ
ಬಳಿಯಿತ್ತು ಎನ್ನಲಾಗಿದೆ. ಮಹಿಳೆಯು ತನ್ನ ಸ್ಟಾಪ್ ಬರುತ್ತಿದ್ದಂತೆ ಬ್ಯಾಗ್ ಪಡೆದುಕೊಂಡು ಇಳಿದು
ಹೋಗಿದ್ದಾರೆ ಎನ್ನಲಾಗಿದೆ. ಆದರೆ, ಬಸ್ ಕಂಡಕ್ಟರ್ ತಾವು ಮಹಿಳೆಯನ್ನು ಮುಟ್ಟಿದ್ದಾಗಿ ತಗಾದೆ ತೆಗೆದಿದ್ದು,
ಬಳಿಕ ಮಾತಿನ ಚಕಮಕಿ ನಡೆದು ಈ ವ್ಯಕ್ತಿಯನ್ನು ರಾಯಿ ಬಳಿ ಬಸ್ ನಿಂದ ಇಳಿಸಿದ್ದು, ಅಲ್ಲಿಗೆ ಆಗಮಿಸಿದ್ದ
ಹಿಂದೂ ಸಂಘಟನೆಯ ಕಾರ್ಯಕರ್ತರು ವ್ಯಕ್ತಿಗೆ ಥಳಿಸಿದ್ದಾಗಿ ದೂರಲಾಗಿದೆ.
ಇದೀಗ ಘಟನೆಯ
ವೀಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಘಟನೆ ಕುರಿತ ಸತ್ಯಾಸತ್ಯತೆ
ಇನ್ನಷ್ಟೇ ಹೊರಬರಬೇಕಿದೆ.