SULYA: ಸುಳ್ಯದಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿ!!
Monday, December 19, 2022
ಸುಳ್ಯ: ಸುಳ್ಯ ತಾಲೂಕಿನ ಅಡ್ಪಂಗಾಯ, ಮೇನಾಲ ಹಾಗೂ ಇನ್ನಿತರ ಕಡೆಗಳಲ್ಲಿ ಅಕ್ರಮವಾಗಿ ಜೋಡಿಸಿದ್ದ ಮರಳು ದಿಬ್ಬಗಳು, ಕೆಂಪು ಕಲ್ಲು ಗಣಿಗಾರಿಕೆ ಮೇಲೆ ಗಣಿ ಅಧಿಕಾರಿಗಳು ಇಂದು ದಿಢೀರ್ ದಾಳಿ ಮಾಡಿದ್ದಾರೆ.
ಸುಮಾರು ನೂರಕ್ಕು ಅಧಿಕ ಅಕ್ರಮ ಮರಳು ಲೋಡ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಇದರಲ್ಲಿ ಕಾರ್ಯಚರಿಸುತ್ತಿದ್ದ ಲಾರಿ ಹಾಗೂ ಗಣಿಗಾರಿಕೆ ಪ್ರದೇಶ ಪ್ರಭಾವಿ ರಾಜಕೀಯ ನಾಯಕರದ್ದು ಎನ್ನಲಾಗಿದೆ. ಇನ್ನು ಮುಂದುವರಿದ ಭಾಗವಾಗಿ ಕೆಂಪು ಕಲ್ಲು ಗಣಿಗಾರಿಕಾ ಪ್ರದೇಶಕ್ಕೂ ದಾಳಿ ಮಾಡಲಾಗಿದೆ ಎಂಬ ಮಾಹಿತಿಯೂ ತಿಳಿದುಬಂದಿದೆ.

