
BELTHANGADY: ಬೆತ್ತಲೆಗೊಳಿಸಿ ಹತ್ಯೆ; ತೋಟಕ್ಕೆ ಎಸೆದು ಕೀಚಕರು ಪರಾರಿ
ಬೆಳ್ತಂಗಡಿ: ದಲಿತ ವ್ಯಕ್ತಿಯೋರ್ವರಿಗೆ ಮಾರಣಾಂತಿಕ ಹಲ್ಲೆ ಮಾಡಿದಲ್ಲದೆ, ಹಲ್ಲೆಗೊಳಗಾಗಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭ ಕೊಠಡಿಯಲ್ಲಿ ಕೊಲೆ ಮಾಡಿ ನಂತರ ತೋಟದಲ್ಲಿ ಬೆತ್ತಲೆಗೊಳಿಸಿ ಕೊಲೆಯಾದವನ ಬಳಿ ಇದ್ದ ಹಣವನ್ನು ದೋಚಿ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ನಡೆದಿದೆ.
ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎಸಿ ಕುರಿಯನ್ ಮಾಲಕತ್ವದ ಸಾರ ಫಾರ್ಮ್ ತೋಟದ ಮನೆಯಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ(30) ಕೊಲೆಯಾದ ವ್ಯಕ್ತಿ. ಕಳೆದೆರಡು ದಿನಗಳ ಹಿಂದೆ ತೋಟದ ಮನೆಯಲ್ಲಿ ಸಂಜೆ ವೇಳೆಗೆ ತಿಮ್ಮಪ್ಪ ಪೂಜಾರಿ, ಲಕ್ಷö್ಮಣ ಪೂಜಾರಿ, ಕೆಕೆ ಆನಂದ ಪೂಜಾರಿ ಹಾಗೂ ಮಹೇಶ್ ಪೂಜಾರಿ ಎಂಬವರು ಶ್ರೀಧರ ಅವರಿಗೆ ಹಲ್ಲೆಮಾಡಿದ್ದರು ಎನ್ನಲಾಗಿದೆ.
ಬಳಿಕ ತೋಟದ ಕೆಲಸಗಾರರಾದ ಅಬ್ರಹಾಂ ಮತ್ತು ಪರಮೇಶ್ವರ ಎಂಬವರು ಬಂದಾಗ ಈ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದರು. ಇದಾದ ಬಳಿಕ ಹಲ್ಲೆಗೊಳಗಾದ ಶ್ರೀಧರ ಅವರನ್ನ ತೋಟದ ಮನೆಯ ಕೊಠಡಿಗೆ ಕೆಲಸಗಾರರು ಕರೆದುಕೊಂಡು ಹೋಗಿ ಉಪಚರಿಸಿ ವಿಶ್ರಾಂತಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಹಲ್ಲೆಗೊಳಗಾದ ಮರುದಿನ ಬೆಳಗ್ಗೆ ಶ್ರೀಧರ ಅವರನ್ನ ಕರೆದಾಗ ಕೊಠಡಿಯಲ್ಲಿ ಇರಲಿಲ್ಲ, ನಾಪತ್ತೆಯಾಗಿದ್ದರು. ತೋಟದ ಸುತ್ತಮುತ್ತ ಹುಡುಕಾಡಿದಾಗ ಸುಮಾರು ದೂರದಲ್ಲಿ ಶ್ರೀಧರ ಅವರು ಬೆತ್ತಲೆಯಾಗಿ ಸಾವನ್ನಪ್ಪಿರುವುದು ಕಂಡುಬಂದಿದೆ.
ಈ ಬಗ್ಗೆ ತೋಟದ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ತೋಟದ ಸುತ್ತಮುತ್ತ ಪರಿಶೀಲಿಸಿದಾಗ ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಯನ್ನ ಕತ್ತರಿಸಿರುವುದು ಕಂಡುಬಂದಿದೆ. ಇದರಿಂದಲೇ ಶ್ರೀಧರ ಅವರನ್ನ ಕೊಲೆಮಾಡಲಾಗಿದೆ ಎಂದು ಶಂಕಿಸಲಾಗಿದೆ. ಇಷ್ಟೇ ಅಲ್ಲದೇ ಶ್ರೀಧರ ಅವರಿಗೆ ಹಲ್ಲೆಮಾಡಿದ್ದ ನಾಲ್ವರು ಕೊಲೆಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಅಲ್ಲದೇ ಶ್ರೀಧರ ಅವರಲ್ಲಿದ್ದ 9500 ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹರೀಶ್ ಮುಗೇರ ಎಂಬವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಧರ್ಮಸ್ಥಳ ಠಾಣಾ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮತ್ತು ಬೇಟಿ ನೀಡಿ ವಿಚಾರಣೆಯನ್ನ ಕೈಗೆತ್ತಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.