SULYA: ಸುಳ್ಯ ತಾಲೂಕಿನ ಕೆಲವೆಡೆ ಭೂಮಿ ಕಂಪನ!?
Friday, December 2, 2022
ಸುಳ್ಯ: ದ.ಕ. ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಭೂಕಂಪನದ ಅನುಭವವಾಗಿದ್ದು, ಮನೆಯಲ್ಲಿದ್ದ ಕೆಲ ಜನರು ಆತಂಕದಿಂದ ಹೊರ ಓಡಿಬಂದಿದ್ದಾರೆ.
ನಿನ್ನೆ ಸಂಜೆ ಸುಮಾರು 7.34ರ ಸುಮಾರಿಗೆ ಸುಳ್ಯ ತಾಲೂಕಿನ ಮಡಪ್ಪಾಡಿ, ಕಡ್ಯ, ಹಾಡಿಕಲ್ಲು ಗ್ರಾಮದಲ್ಲಿ ಭಾರೀ ಶಬ್ದ ಕೇಳಿಬಂದಿದೆ. ಜೊತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಕೆಲ ಮೆಯಲ್ಲಿದ್ದವರು ಹೊರ ಓಡಿ ಬಂದಿದ್ದಾರೆ. ಭೂಕಂಪನದ ಬಗ್ಗೆ ಭೂವಿಜ್ಝಾನ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ಇದೇ ರೀತಿಯಲ್ಲಿ ಸುಳ್ಯ ತಾಲೂಕಿನಲ್ಲಿ ಭೂಕಂಪನದ ಅನುಭವವಾಗಿತ್ತು. ಇದೀಗ ಮತ್ತೆ ಭೂಮಿ ಕಂಪಿಸಿ ಜನರಲ್ಲಿ ಆತಂಕವನ್ನ ಹೆಚ್ಚಿಸಿದೆ.