-->
MANGALORE: ಮಣ್ಣು ಕುಸಿದು ಬಿದ್ದು ವ್ಯಕ್ತಿ ದುರ್ಮರಣ!!

MANGALORE: ಮಣ್ಣು ಕುಸಿದು ಬಿದ್ದು ವ್ಯಕ್ತಿ ದುರ್ಮರಣ!!


ಮಂಗಳೂರು: ಟಾಯ್ಲೆಟ್ ಗುಂಡಿ ತೆಗೆಯುತ್ತಿದ್ದ ವೇಳೆ ಮಣ್ಣು ಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರಿನ ಅಡ್ಡೂರಿನಲ್ಲಿ ನಡೆದಿದೆ. ಮೃತರನ್ನ ಅಡ್ಡೂರಿನ ನಿವಾಸಿ ಆದಮಾಕ ಎಂದು ಗುರುತಿಸಲಾಗಿದೆ. 

ಅಡ್ಡೂರು ಬದ್ರಿಯಾ ಮಸೀದಿಯ ಹಿಂಭಾಗದಲ್ಲಿರುವ ಮನೆಯೊಂದರ ಟಾಯ್ಲೆಟ್ ಗುಂಡಿ ಕೆಲಸಕ್ಕೆ ಆದಮಾಕ ಹೋಗಿದ್ದರು. ಈ ವೇಳೆ ಗುಂಡಿ ತೆಗೆಯುತ್ತಿದ್ದಂತೆ ಏಕಾಏಕಿ ಒಮ್ಮೆಲೆ ಮಣ್ಣು ಮೇಲೆಯಿಂದ ಕುಸಿದಿದೆ. ಪರಿಣಾಮ ಕೆಳಗಿದ್ದ ಆದಮಾಕ ಅವರ ಮೇಲೆ ಒಮ್ಮೆಲೆ ಮಣ್ಣು ಬಿದ್ದು ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. 

Ads on article

Advertise in articles 1

advertising articles 2

Advertise under the article