MANGALORE: ಸಿಎಂ ಬೊಮ್ಮಾಯಿ ಜೊತೆ ಮಾಜಿ ಶಾಸಕ ಮೊಯ್ದೀನ್ ಬಾವ ಮಾತುಕತೆ!
ಮಂಗಳೂರು: ಸುರತ್ಕಲ್ ನಗರದ ಕಾಟಿಪಳ್ಳ ನಾಲ್ಕನೇ ಬ್ಲಾಕ್ ನಲ್ಲಿ ನಡೆದ ಜಲೀಲ್ ಹತ್ಯೆಗೆ ಸಂಬಂಧಿಸಿದಂತೆ ನಿನ್ನೆ ಸಿಎಂ ಬೊಮ್ಮಾಯಿ ಜೊತೆ ಮಾಜಿ ಶಾಸಕ ಮೊಯ್ದೀನ್ ಬಾವ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದೀರ್ಘವಾಗಿ ಮಾತುಕತೆ ನಡೆಸಿದ್ರು.
ಜಲೀಲ್ ಓರ್ವ ಅಮಾಯಕ. ಆತ ಯಾವ ಮತೀಯವಾದ ಸಂಘಟನೆಗಳಲ್ಲೂ ಗುರುತಿಸಿಕೊಂಡವನಲ್ಲ. ಹೀಗಿರುವಾಗ ಕಾಟಿಪಳ್ಳ ನಗರದಲ್ಲೇ ಅಮಾಯಕನನ್ನ ಚೂರಿ ಇರಿದು ಕೊಲೆ ಮಾಡುತ್ತಾರೆ. ಹಾಗಾಗಿ ಇಂತಹ ದುಷ್ಕೃತ್ಯ ಎಸೆಗಿದವರನ್ನ ಆದಷ್ಟು ಶೀಘ್ರವಾಗಿ ಪತ್ತೆಹಚ್ಚಿ, ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಶಿಕ್ಷೆಯಾಗಬೇಕು. ಜಲೀಲ್ ಹತ್ಯೆಗೆ ನ್ಯಾಯ ಒದಗಿಸಿಕೊಂಡುವಂತೆ ಸಿಎಂ ಅವರಲ್ಲಿ ಮನವಿ ಮಾಡಿಕೊಂಡ್ರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪದೇ ಪದೇ ಇಂತಹ ಕೃತ್ಯಗಳು ನಡೀತಾನೇ ಇವೆ. ಇತ್ತೀಚೆಗೆ ಫಾಝೀಲ್ ಎಂಬಾತನ ಕೊಲೆಯೂ ನಡೆದಿತ್ತು. ಇದೀಗ ಜಲೀಲ್ ಕೊಲೆ ನಡೆದಿದೆ. ಹಾಗಾಗಿ ಪೊಲೀಸರು ಇಂತಹ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಲು ಸಿಎಂ ಬೊಮ್ಮಾಯಿ ಅವರಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವ ಒತ್ತಾಯಿಸಿದ್ರು.