Udupi: ಕುಸಿದು ಬಿದ್ದು ಯುವತಿ ಸಾವು; ಕುಟುಂಬಿಕರಲ್ಲಿ ಮಡುಗಟ್ಟಿದ ಶೋಕ
Thursday, November 24, 2022
ಉಡುಪಿ: ರೋಸ್ ಸಮಾರಂಭಕ್ಕೆ ಆಗಮಿಸಿದ್ದ ಯುವತಿಯೋರ್ವಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯ ಹಾವಂಜೆಯಲ್ಲಿ ನಡೆದಿದೆ.
ಹಾವಂಜೆ ನಿವಾಸಿ ಜೋಸ್ನಾ ಲೂವಿಸ್ (23) ಮೃತ ಯುವತಿ.
ಜೋಸ್ನಾ ಬುಧವಾರ ರಾತ್ರಿ ಕೊಳಲಗಿರಿ ಬಳಿ ಇರುವ ಹಾವಂಜೆಯ ತಮ್ಮ ಸಂಬಂಧಿಕರ ಮನೆಯ ರೋಸ್ ಕಾರ್ಯಕ್ರಮಕ್ಕೆಂದು ಆಗಮಿಸಿದ್ದರು. ರಾತ್ರಿ ಸುಮಾರು 8.30 ರ ವೇಳೆಗೆ ಜೋಸ್ನಾ ಕೂತಲ್ಲಿಯೇ ಕುಸಿದು ಬಿದ್ದಿರುವುದಾಗಿ ಹೇಳಲಾಗಿದೆ.
ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆ ಸಾಗಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಗುರುವಾರ ಬೆಳಿಗ್ಗೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಜೋಸ್ನಾ ಸಾವಿನಿಂದ ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಕೊರೊನಾ ಲಸಿಕೆ ಪಡೆದ ಬಳಿಕ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ದಿಢೀರನೆ ಸಾವಿಗೀಡಾಗುತ್ತಿರುವ ವಿಚಾರ ಚರ್ಚೆಯಾಗುತ್ತಿರುವಾಗಲೇ ಆರೋಗ್ಯವಂತಳಾಗಿದ್ದ ಜೋಸ್ನಾ ಸಾವು ಆತಂಕಕ್ಕೆ ಕಾರಣವಾಗಿದೆ.
ಜೋಸ್ನಾ ಲೂವಿಸ್ ಅಸಹಜ ಸಾವು ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.