Mangaluru: ಶಂಕಿತ ಉಗ್ರ ಶಾರೀಕ್ ಆರೋಗ್ಯದಲ್ಲಿ ಚೇತರಿಕೆ; ಕರಾವಳಿಯಲ್ಲಿ ಮತ್ತೆ ರಿಂಗುಣಿಸಿದ ಸ್ಯಾಟಲೈಟ್ ಫೋನ್!
ಮಂಗಳೂರು: ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ,
ಶಂಕಿತ ಉಗ್ರ ಶಾರೀಕ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಗರದ
ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಾರೀಕ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯದಲ್ಲಿ
ಚೇತರಿಕೆ ಕಂಡು ಬರುತ್ತಿದೆ ಎನ್ನಲಾಗಿದೆ. ಈತನ ಆರೋಗ್ಯ ಸುಧಾರಿಸಿದ್ದಲ್ಲಿ ಹೆಚ್ಚಿನ ವಿಚಾರಣೆ ಸಾಧ್ಯವಾಗಬಹುದು.
ಮತ್ತೆ ರಿಂಗುಣಿಸಿದ
ಸ್ಯಾಟಲೈಟ್ ಫೋನ್
ಉಗ್ರ ಭೀತಿ ಆತಂಕದ ನಡುವೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎರಡ್ಮೂರು
ಪ್ರದೇಶಗಳಲ್ಲಿ ಬಳಕೆ ನಿಷೇಧಿತ ಸ್ಯಾಟಲೈಟ್ ಫೋನ್ ಸದ್ದು ಮಾಡಿದ್ದು ಪೊಲೀಸರನ್ನು ಚಿಂತೆಗೀಡು ಮಾಡಿದೆ.
ಈ ನಿಟ್ಟಿನಲ್ಲಿ ಪೊಲೀಸ್ ತನಿಖೆಯೂ ಮುಂದುವರೆದಿದೆ.
ಕೇಸರಿ ಶಾಲು
ಹಾಕಿಕೊಳ್ಳುತ್ತಿದ್ದ ಶಾರೀಕ್
ಶಂಕಿತ ಉಗ್ರ ಶಾರೀಕ್ ಈ ಹಿಂದೆ ಮಂಗಳೂರಿಗೆ ಬಂದಿರುವುದು ಆತನ ಮೊಬೈಲ್
ಸಿಗ್ನಲ್ ನಿಂದಾಗಿ ತಿಳಿದು ಬಂದಿದೆ. ಈ ಸಂದರ್ಭ ಮಣ್ಣಗುಡ್ಡೆ ವ್ಯಾಪ್ತಿಯಲ್ಲಿ ಓಡಾಟ ನಡೆಸಿದ್ದ ಎನ್ನಲಾಗಿದೆ.
ಆರ್.ಎಸ್.ಎಸ್ ಸಂಘಟನೆಯ ಪ್ರಮುಖ ಕಚೇರಿಯು ಇದೇ ಪರಿಸರದಲ್ಲಿ ಇರುವುದರಿಂದ ಸಂಘ ನಿಕೇತನದ ಬಗ್ಗೆ ನಿಗಾ
ವಹಿಸಲಾಗಿದೆ. ಜೊತೆಗೆ ಕದ್ರಿ, ಕುದ್ರೋಳಿ, ಮಂಗಳಾದೇವಿ ಸಹಿತ ಹಲವು ದೇಗುಲಕ್ಕೆ ಬರುವವರ ಮೇಲೂ ನಿಗಾ
ವಹಿಸಲಾಗಿದೆ.