
UDUPI: ನೀವ್ ಬರೆದಿಟ್ಟುಕೊಂಡು ಬಿಡಿ; ಮುಖ್ಯಮಂತ್ರಿನೂ ಆಗಲ್ಲ...!!!
Monday, November 7, 2022
ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಾವೇ ಅಧಿಕಾರಕ್ಕೆ ಬರ್ತೇವೆ ಅಂತ ಸಿದ್ದರಾಮಯ್ಯನವರು ಯಾವತ್ತಿಗೂ ಭ್ರಮೆಯಲ್ಲಿರುತ್ತಾರೆ. ಹಾಗಾಗಿ ಸಿದ್ದರಾಮಯ್ಯನವರು ಈವರೆಗೆ ಹೇಳಿದ್ದು ಯಾವತ್ತೂ ಸತ್ಯವಾಗಿಲ್ಲ. ಅವರು ಐದು ವರ್ಷ ಆಡಳಿತ ಸಂದರ್ಭದಲ್ಲಿಯೂ ನಾವೇ ಅಧಿಕಾರಕ್ಕೆ ಬರ್ತೇವೆ ಅಂತ ಹೇಳ್ತಾ ಇದ್ರು. ನಾವು ಆಗಲ್ಲ ಆಗಲ್ಲ ಅಂದ್ರು ಯಡಿಯೂರಪ್ಪನವರೇ ಮತ್ತೆ ಮುಖ್ಯಮಂತ್ರಿ ಆದ್ರು..
ನಾವು ಹೇಳೋದು ಕೇಳಿ ಸಿದ್ದರಾಮಯ್ಯನವರೇ ಬರೆದಿಟ್ಟುಕೊಂಡು ಬಿಡಿ, ನೀವು ಹೇಳಿದ್ದು ಯಾವತ್ತಿಗೂ ಸತ್ಯ ಆಗಲ್ಲ. ಯಾಕಂದ್ರೆ ನಾನೇ ಸಿಎಂ ಆಗ್ತೀನಿ ಅಂತ ಹೇಳ್ತಿದ್ದ ಸಿದ್ದರಾಮಯ್ಯನವರು ಸಿಎಂ ಮತ್ತೆ ಆಗಿಲ್ಲ. ಆದ್ರೆ ಯಡಿಯೂರಪ್ಪನವರು ಮತ್ತೆ ಕುಮಾರಸ್ವಾಮಿಯವ್ರು ಮುಖ್ಯಮಂತ್ರಿ ಆದ್ರು ಅಂತ ಸಿಎಂ ಬೊಮ್ಮಾಯಿ ವ್ಯಂಗ್ಯವಾಡಿದ್ರು.