MANGALORE: ಟೋಲ್ ಪ್ರೊಟೆಸ್ಟ್ ಎಫೆಕ್ಟ್; ಹೆಲಿಕಾಪ್ಟರ್ ನಲ್ಲಿ ಉಡುಪಿಗೆ ಸಿಎಂ
Monday, November 7, 2022
ಮಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಗೆ ಮಂಗಳೂರಿನಲ್ಲಿ ಟೋಲ್ ಪ್ರೊಟೆಸ್ಟ್ ಎಫೆಕ್ಟ್ ಎದುರಾಗಿದೆ. ಹೌದು ಇಂದು ಮಂಗಳೂರಿನಿಂದ ಉಡುಪಿಗೆ ಹೋಗಲು ಕಾರಿನಲ್ಲಿ ಪ್ರಯಾಣಿಸದೆ, ಬದಲಾಗಿ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಿದ್ರು.
ಕಾರಣ ಹುಡುಕಿದ್ರೆ ಸುರತ್ಕಲ್ ಎನ್ ಐಟಿಕೆ ಬಳಿ ಟೋಲ್ ಹೋರಾಟಗಾರರಿಂದ ಪ್ರೊಟೆಸ್ಟ್ ಬಿಸಿ ಎದುರಾಗಬಹುದು ಅನ್ನೋ ಕಾರಣಕ್ಕೆ ಹೆಲಿಕಾಪ್ಟರ್ ನಲ್ಲಿ ಸಿಎಂ ತೆರಳಿದ್ರು ಎನ್ನಲಾಗ್ತಿದೆ. ಇನ್ನು ಇಂದು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆಗಾಗಿ ಸಿಎಂ ಬೊಮ್ಮಾಯಿ ಬೈಂದೂರಿಗೆ ತೆರಳಿದ್ದಾರೆ. ಇನ್ನು ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಸಾಥ್ ನೀಡಿದ್ರು.