-->
ಕುಣಿಗಲ್: ಅಪಘಾತಕ್ಕೆ ಬಜ್ಪೆ ಮೂಲದ RSS ಮುಖಂಡ ಮೃತ್ಯು; ಸಿಎಂ‌ ಸಹಿತ ಗಣ್ಯರ ಸಂತಾಪ

ಕುಣಿಗಲ್: ಅಪಘಾತಕ್ಕೆ ಬಜ್ಪೆ ಮೂಲದ RSS ಮುಖಂಡ ಮೃತ್ಯು; ಸಿಎಂ‌ ಸಹಿತ ಗಣ್ಯರ ಸಂತಾಪ



ಮಂಗಳೂರು: ಕುಣಿಗಲ್ ಬಳಿ ನಡೆದ ಅಪಘಾತದಲ್ಲಿ ಮಂಗಳೂರಿನ ಬಜ್ಪೆ ಸಮೀಪದ ಹಿರಿಯ RSS ಸ್ವಯಂ ಸೇವಕ, ಬಿಜೆಪಿ ಸಕ್ರಿಯ ಕಾರ್ಯಕರ್ತ ಭಾಸ್ಕರದಾಸ್ ಎಕ್ಕಾರು (65) ಮೃತಪಟ್ಟಿದ್ದಾರೆ. 

ರಸ್ತೆ ಅಪಘಾತದ ನಡೆದ ತಕ್ಷಣ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರ ಅಂತಿಮ ದರ್ಶನವು ಕಟೀಲು ಹಳೆ ಪೆಟ್ರೋಲ್ ಪಂಪ್ ಬಳಿ ನಡೆಯಲಿದೆ. ಮೃತರು ಮೂವರು ಮಕ್ಕಳು ಮತ್ತು ಅಪಾರ ಸಂಖ್ಯೆಯ ಕುಟುಂಬಿಕರು ಮತ್ತು ಸ್ನೇಹಿತರನ್ನು ಅಗಲಿದ್ದಾರೆ.

ಮೃತರು RSS ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣದ ಸಮನ್ವಯ ಪರಿಯೋಜನಾ ಪ್ರಮುಖ್ ಆಗಿದ್ದರು.



ಸಿಎಂ, ನಳಿನ್ ಕುಮಾರ್ ಸಂತಾಪ

ಭಾಸ್ಕರ್ ದಾಸ್ ಎಕ್ಕಾರ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ, ಸಿಎಂ ಬಸವರಾಜ ಬೊಮ್ಮಾಯಿ, ಡಾ. ಅಶ್ವತ್ಥ ನಾರಾಯಣ ಸಹಿತ ಹಲವು ಗಣ್ಯರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.


Ads on article

Advertise in articles 1

advertising articles 2

Advertise under the article