MANGALORE: ಸೆಂಟ್ರಲ್ ಮಾರ್ಕೆಟ್ ನಲ್ಲಿ 9 ಬೀಫ್ ಸ್ಟಾಲ್ ಗೆ ಗ್ರೀನ್ ಸಿಗ್ನಲ್
Monday, November 7, 2022
ಮಂಗಳೂರು: ಗೋಹತ್ಯೆ ನಿಷೇಧದ ಬಳಿಕವೂ ಮಂಗಳೂರಿನಲ್ಲಿ 9 ಬೀಫ್ ಸ್ಟಾಲ್ ತೆರೆಯಲು ಬಿಜೆಪಿ ನೇತೃತ್ವದ ಮಂಗಳೂರು ಪಾಲಿಕೆ ಅನುಮತಿ ನೀಡಿದ್ದಕ್ಕೆ ಹಿಂದೂ ಜಾಗರಣ ವೇದಿಕೆ ಕೆಂಡಕಾರಿದೆ.
ಹೌದು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಬೀಫ್ ಸ್ಟಾಲ್ ಗೆ ಬಿಜೆಪಿಯವರೇ ಅನುಮತಿ ನೀಡಿದ್ದಾರೆ. ನಗರದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಸೆಂಟ್ರಲ್ ಮಾರುಕಟ್ಟೆಯಲ್ಲಿ ತರಕಾರಿ, ಕೋಳಿ ಅಂಗಡಿಗಳ ಜೊತೆಗೆ 9 ಬೀಫ್ ಸ್ಟಾಲ್ ಗೆ ಅನುಮತಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಪಾಲಿಕೆ ಮುಂಭಾಗದಲ್ಲಿ ಭಾರೀ ಜನಸಂಖ್ಯೆಯಲ್ಲಿ ಹಿಂದೂ ಮುಖಂಡರು ಕಾರ್ಯಕರ್ತರು ಸೇರಿ ಪ್ರತಿಭಟನೆಗೆ ಮುಂದಾಗಿದ್ದಾರೆ.