PUTTUR: ಪುತ್ತೂರು ಪತ್ರಕರ್ತರ ಸಂಘಕ್ಕೆ ಇಂದಿನಿಂದ ಶುಕ್ರದೆಸೆ...!!!
ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸರ್ವ ಸದಸ್ಯರ ಸಭೆ ಪತ್ರಿಕಾಭವನದಲ್ಲಿ ನಡೆಯಿತು. ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರ ಆಗ್ರಹದ ಮೇರೆಗೆ ಹಿರಿಯ ಸದಸ್ಯ ಐ.ಬಿ. ಸಂದೀಪ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು.
ಐ.ಬಿ.ಸಂದೀಪ್ ಕುಮಾರ್, ಅಧ್ಯಕ್ಷರು
ಹಲವು ಸಮಯಗಳಿಂದ ಅತಂತ್ರವಾಗಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತೆ ಸದಸ್ಯರ ಸಭೆಯಲ್ಲಿ ನಡೆಸುವಂತೆ ಸದಸ್ಯರು ಆಗ್ರಹಿಸಿದರು. ಈ ಹಿನ್ನಲೆಯಲ್ಲಿ ಪುತ್ತೂರು ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಜಿತ್ ಕುಮಾರ್, ಕಾರ್ಯದರ್ಶಿ
ಸಂಘದ ಅಧ್ಯಕ್ಷರಾಗಿ ಹೊಸದಿಗಂತ ಪತ್ರಿಕೆಯ ಐ.ಬಿ.ಸಂದೀಪ್ ಕುಮಾರ್, ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕದ ಕುಮಾರ್ ಕಲ್ಲಾರೆ, ಕಾರ್ಯದರ್ಶಿಯಾಗಿ ನ್ಯೂಸ್ 18 ಕನ್ನಡ ವರದಿಗಾರ ಅಜಿತ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ರಾಜೇಶ್ ಪಟ್ಟೆ, ಖಜಾಂಚಿಯಾಗಿ ದೈಜಿವರ್ಲ್ಡ್ ಚಾನಲ್ ವರದಿಗಾರ ಕೃಷ್ಣಪ್ರಸಾದ್ ಬಲ್ನಾಡು ಅವರನ್ನು ಆಯ್ಕೆ ಮಾಡಲಾಯಿತು. ಸಂಘದ ಕಾನೂನು ಸಲಹೆಗಾರರಾಗಿ ವಕೀಲ ನರಸಿಂಹ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು. ಪತ್ರಿಕಾ ಕಛೇರಿಯ ಮೆನೇಜರ್ ಆಗಿ ವಿ ಫೋರ್ ವರದಿಗಾರ ಪ್ರವೀಣ್ ಕುಮಾರ್ ಬೊಳುವಾರು ಅವರನ್ನು ಮುಂದುವರಿಸಲು ತೀರ್ಮಾನಿಸಲಾಯಿತು.
.jpeg)
.jpeg)