ಪುತ್ತೂರು: ಪುತ್ತೂರು ಪಟ್ಟಣದಲ್ಲಿ ಇಂದು ಬೆಳಿಗ್ಗೆ ವರುಣ ತಂಪೆರೆದಿದ್ದಾನೆ. ಅಲ್ಪ ಸ್ವಲ್ಪ ಚಳಿಯ ನಡುವೆ ತುಂತುರು ಮಳೆ ಬಂದಿದೆ. ಗ್ರಾಮೀಣ ಭಾಗದಲ್ಲಿ ಮಳೆ ಬಾರದಿದ್ದರೂ, ಪಟ್ಟಣದಲ್ಲಿ ಮಳೆ ಬಂದು ಜನರನ್ನ ತಂಪಾಗಿಸಿತು. ಇನ್ನೂ ಈಗಾಗ್ಲೇ ಮುಂದಿನ ನಾಲ್ಕು ದಿನಗಳಲ್ಲಿ ಮಳೆಯ ಮುನ್ಸೂಚನೆ ಇದೆ ಎಂಬ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ.