-->
NITK Tollgate: ಮೂರು ದಿನಗಳಲ್ಲಿ ಅಂತಿಮ ಆದೇಶ; ಹೋರಾಟಗಾರರಿಗೆ ಡಿಸಿ ಭರವಸೆ

NITK Tollgate: ಮೂರು ದಿನಗಳಲ್ಲಿ ಅಂತಿಮ ಆದೇಶ; ಹೋರಾಟಗಾರರಿಗೆ ಡಿಸಿ ಭರವಸೆ



ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ನಡೆಯುತ್ತಿರುವ ಹಗಲು ರಾತ್ರಿ ಧರಣಿ ಒಂದು ತಿಂಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಹಾಗೂ ಟೋಲ್ ಗೇಟ್ ತೆರವು ಅಧ್ಯಾದೇಶ ಹೊರಟು ಹತ್ತು ದಿನಗಳು ದಾಟಿದರೂ ಟೋಲ್ ಸಂಗ್ರಹ ಸ್ಥಗಿತಗೊಳಿಸದಿರುವ ಕುರಿತು ಚರ್ಚಿಸಲು ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ನಿಯೋಗ ದ‌.ಕ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿತು. 

ನಿಯೋಗದ ಆಕ್ಷೇಪ, ಬೇಡಿಕೆಗಳನ್ನು  ಆಲಿಸಿದ ಜಿಲ್ಲಾಧಿಕಾರಿ ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸುತ್ತೇವೆ. ಹೆದ್ದಾರಿ ಇಲಾಖೆಯ ದೆಹಲಿ ಕಚೇರಿಯಿಂದ ಅಂತಿಮ ಪತ್ರ ಅಷ್ಟರಲ್ಲಿ ತಲುಪಲಿದೆ. ಅಲ್ಲಿಯವರಗೆ ಸಹಕರಿಸುವಂತೆ ವಿನಂತಿಸಿದರು ಎಂದು ಜಂಟಿ ವೇದಿಕೆಯು ತಿಳಿಸಿದೆ.

ವೇದಿಕೆಯ ಅಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ, ಸಿಪಿಎಂ ಜಿಲ್ಲಾ ಮುಖಂಡರಾದ ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಕಾಂಗ್ರೆಸ್ ಪಕ್ಷದ ಶಾಲೆಟ್ ಪಿಂಟೊ, ರಾಜ್ಯ ರೈತ ಸಂಘದ ಓಸ್ವಾಲ್ಡ್ ಫರ್ನಾಂಡೀಸ್, ಸನ್ನಿ ಡಿಸೋಜ, ದಲಿತ ಸಂಘರ್ಷ ಸಮಿತಿಯ  ಜೆಡಿಎಸ್ ನ ವಸಂತ ಪೂಜಾರಿ, ಎಂ ದೇವದಾಸ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article