Cooker Bomb Blast; ಆರಾಮವಾಗಿ ಓಡಾಡುತ್ತಿದ್ದನೇ ಉಗ್ರ ಶಾರೀಕ್?; ರಾಜ್ಯ ಪೊಲೀಸ್ ಇಂಟೆಲಿಜೆನ್ಸಿ ಮಹಾ ವೈಫಲ್ಯ..!
ಮಂಗಳೂರು:
ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಹತ್ತು ಹಲವು ಬಗೆಯ ಚರ್ಚೆಗಳು ಮುನ್ನೆಲೆಗೆ ಬಂದಿದೆ.
ಈ ಹಿಂದೆ ದೇಶದ್ರೋಹದಂತಹ ಪ್ರಕರಣದಲ್ಲಿ ಬಂಧಿತನಾಗಿದ್ದವ ಬಿಡುಗಡೆಯಾದ ಮೇಲೆ ಮತ್ತೊಂದು ಕೃತ್ಯವನ್ನು
ಆರಾಮವಾಗಿ ಮಾಡಿ ಮುಗಿಸುತ್ತಿದ್ಧಾನೆ ಎಂದರೆ ಇದು ರಾಜ್ಯ ಪೊಲೀಸ್ ಇಂಟೆಲಿಜಿನ್ಸಿಯ ಮಹಾ ವೈಫಲ್ಯ ಎಂದು
ನಿವೃತ್ತ ಪೊಲೀಸ್ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಎರಡು ವರ್ಷಗಳ
ಹಿಂದಷ್ಟೇ ಉಗ್ರರ ಪರ ಗೋಡೆ ಬರಹ ಬರೆದು ಅರೆಸ್ಟ್ ಆಗಿದ್ದಾತ ಮತ್ತೆ ಅದೇ ಮಂಗಳೂರು ನಗರದಲ್ಲಿ ಬಾಂಬ್
ಜೊತೆಗೆ ಬಂದು ಸ್ಫೋಟಕ್ಕೆ ಸಂಚು ಹೂಡಿದ್ದನ್ನು ನೋಡುತ್ತಿದ್ದರೆ ಇಂಟೆಲಿಜೆನ್ಸಿ ವೈಫಲ್ಯ ಅನ್ನೋ ವಿಪಕ್ಷ
ನಾಯಕ ಸಿದ್ದರಾಮಯ್ಯ ಹೇಳಿಕೆ ನಿಜವೆನಿಸುತ್ತಿದೆ.
ಕುಕ್ಕರ್ ತುಂಬಿತ್ತು
ಭಯಾನಕ ಬಾಂಬ್!
ಶಂಕಿತ ಉಗ್ರ ಶಾರೀಕ್ ತಂದಿರುವ ಬಾಂಬ್ ಅಂತಿಂಥ ಬಾಂಬ್ ಅಲ್ಲ. ಶಾರೀಕ್ ಪ್ಲಾನ್ ಮಾಡಿದ ರೀತಿಯಲ್ಲಿ ಎಲ್ಲವೂ ನಡೆಯುತ್ತಿದ್ದರೆ ಊಹಿಸಲಾಗದ ದುರಂತ ನಡೆದು ಹೋಗುತ್ತಿತ್ತು. ಹೀಗಂತ ಸ್ಫೋಟಕ ಮಾಹಿತಿಯನ್ನು ಎಫ್.ಎಸ್.ಎಲ್ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ. ಶಾರೀಕ್ ಮೂರು ಲೀಟರ್ ಕುಕ್ಕರ್ ತುಂಬಾ ಸ್ಪೋಟಕದ ಜೆಲ್ ತುಂಬಿಸಿಕೊಂಡಿದ್ದ. ಅದರ ಜೊತೆ ಒಂದು ಡಿಟೋನೇಟರ್ ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತು. ಆದರೆ ಡಿಟೋನೇಟರ್ ಪ್ಲಸ್ ಮತ್ತು ಮೈನಸ್ ಗೆ ಬೆಂಕಿ ಹೊತ್ತಿಕೊಳ್ಳದೆ, ಕೇವಲ ಸ್ಫೋಟಕ ಜೆಲ್ ಗೆ ಮಾತ್ರ ಬೆಂಕಿ ಹೊತ್ತಿಕೊಂಡಿದ್ದರಿಂದ ದಟ್ಟ ಹೊಗೆ ಮಾತ್ರ ಬಂದಿದ್ದು ದೊಡ್ಡ ಮಟ್ಟಿನ ಸ್ಫೋಟ ನಡೆದಿಲ್ಲ ಎಂಬುವುದು ಸ್ಫೋಟಕ ಅವಶೇಷಗಳನ್ನು ಪರಿಶೀಲನೆ ಮಾಡಿದ ಸಮಯದಲ್ಲಿ ಗೊತ್ತಾಗಿದೆ.
ಪೊಲೀಸ್ ಇಂಟಲಿಜೆನ್ಸಿ ವಿಫಲ...!!!
ಹೌದು, ನಾಗೂರಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪೊಲೀಸ್ ಇಂಟಲಿಜೆನ್ಸಿ ವಿಫಲವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಘಟನೆ ನಡೆದ ಸಮಯದಲ್ಲಿ ಸ್ಥಳೀಯ ಪೊಲೀಸರ ನಿರ್ಲಕ್ಷ್ಯದಿಂದ ಸ್ಫೋಟ ನಡೆದ ಸ್ಥಳದಲ್ಲಿ ಕೇಂದ್ರ ತನಿಖಾ ತಂಡಕ್ಕೆ ಸರಿಯಾದ ಸಾಕ್ಷ್ಯ ಪತ್ತೆಹಚ್ಚಲು ಕಷ್ಟವಾಗಿತ್ತು ಎಂಬ ಮಾತು ಇಲಾಖೆಯ ಒಳಗೆ ಚರ್ಚೆಯಾಗಿದೆ. ಇದಕ್ಕಾಗಿ ಕೇಂದ್ರದ ತನಿಖಾ ತಂಡ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದು ಘಟನೆ ನಡೆದ ಸ್ಥಳದ ವೈಫಲ್ಯವಾದರೆ, 2020 ರಲ್ಲಿ ಮಂಗಳೂರಿನ ಬಿಜೈಯಲ್ಲಿ ಉಗ್ರ ಸಂಘಟನೆಗಳ ಪರ ಗೋಡೆ ಬರಹ ಬರೆದ ಸಮಯದಲ್ಲಿಯೇ ಸರಿಯಾದ ಕ್ರಮ ಅಥವಾ ಶಾರೀಕ್ ಮೇಲೆ ನಿಗಾ ಇಟ್ಟಿದ್ದರೆ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ ಎಂಬುವುದು ಜನರ ಪ್ರಶ್ನೆಯಾಗಿದೆ.
ಹೊಣೆ ಹೊರುತ್ತಾ ಗೃಹ ಇಲಾಖೆ..!?
ಬಾಂಬ್ ಸ್ಫೋಟ
ನಡೆದ ಮರುದಿನವೇ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್ ಜನರು ಒಪ್ಪಿಕೊಳ್ಳುವಂತೆ ಆಗಿದೆ. ಅದೃಷ್ಟವಶಾತ್
ಸಾವು ನೋವು ಸಂಭವಿಸದೇ ಹೋದರು, ಪೊಲೀಸ್ ಹಾಗೂ ಗೃಹ ಇಲಾಖೆಯ ವೈಫಲ್ಯತೆ ಮರೆಯುವಂತಿಲ್ಲ. ಹಾಗಾಗಿ ಈ
ಮಹಾ ವೈಫಲ್ಯದ ಹೊಣೆಯನ್ನು ಗೃಹ ಇಲಾಖೆ ಹೊರುತ್ತಾ ಅನ್ನೋದೆ ಪ್ರಶ್ನೆಯಾಗಿದೆ.

