Mangaluru: KSRTC ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ; ಬಾಂಬ್ ಸ್ಕಾಡ್ ದೌಡು!
Monday, November 21, 2022
ಮಂಗಳೂರು: ಆಟೋ ರಿಕ್ಷಾ ಸ್ಫೋಟವಾದ ಬೆನ್ನಿಗೆ ಇದೀಗ ಬಿಜೈಯ KSRTC ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿ ಕೆಲ ಕಾಲ ಆತಂಕಕ್ಕೆ ಕಾರಣವಾಯಿತು.
ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ತೀವ್ರ ಪರಿಶೀಲನೆಗೆ ಒಳಪಡಿಸಿತು. ಬಳಿಕ ಇದು ಪ್ರಯಾಣಿಕನೋರ್ವನ ಬ್ಯಾಗ್ ಅನ್ನೋದು ತಿಳಿದು ಬಂದಿದ್ದು, ಪೊಲೀಸರು ಮತ್ತು ಸಾರ್ವಜನಿಕರು ನಿರಾಳರಾದರು.

