-->
ಮಂಗಳೂರು: ನಾಳೆ ನಗರದ ಹಲವೆಡೆ ಪವರ್ ಕಟ್

ಮಂಗಳೂರು: ನಾಳೆ ನಗರದ ಹಲವೆಡೆ ಪವರ್ ಕಟ್



ಮಂಗಳೂರು: ಅಕ್ಟೋಬರ್ 27 ರಂದು ಹಗಲಿಡೀ ಮಂಗಳೂರು ನಗರದ ಬಹುತೇಕ ಕಡೆ ವಿದ್ಯುತ್ ಸಂಚಾರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಅದರಲ್ಲೂ ಮಂಗಳೂರು ನಗರದ ಪ್ರಮುಖ ವಾಣಿಜ್ಯ, ವ್ಯವಹಾರ ಕೇಂದ್ರದಲ್ಲೇ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹಲವೆಡೆ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿ ಕೈಗೊಳ್ಳಬೇಕಾಗಿ ರುವುದರಿ ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ವಿದ್ಯುತ್ ಸಂಚಾರ ಸ್ಥಗಿತಗೊಳಿಸುವುದು ಅನಿವಾರ್ಯ ಎಂದು ಮೆಸ್ಕಾಂ ತಿಳಿಸಿದೆ. 

ಮಂಗಳೂರು ನಗರದ ಹೃದಯಭಾಗದಲ್ಲಿ ಅಕ್ಟೋಬರ್ 27 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಎಲ್ಲೆಲ್ಲ ಪವರ್ ಕಟ್?

ಸಿಟಿ ಲೈಟ್, ಲೋವರ್ ಕಾರ್ ಸ್ಟ್ರೀಟ್, ಸುಜೀರ್ ಕಾರ್ಸ್ ಟೈಲ್ಸ್, ನೆಲ್ಲಿಕಾಯಿ ರೋಡ್, ಮೆಡ್ ಘೆರ್ ಕಾಂಪ್ಲೆಕ್ಸ್,  ಅಜೀಜುದ್ದೀನ್ ರಸ್ತೆ , ಚೇಂಬರ್ ರೋಡ್ , ಕಂಡತ್ ಪಳ್ಳಿ , ಭಟ್ಕಳ್ ಬಜಾರ್ , ಅನ್ಸಾರಿ ರಸ್ತೆ , ಕಂಡತ್ ಪಳ್ಳಿ , ಡಿ.ಸಿ. ಕಚೇರಿ , ಉಪದಕ್ಕೆ , ಪೋರ್ಟ್‌ರೋಡ್ , ದಕ್ಕೆ , ನೀರೇಶ್ವಾಲ್ಯ ರೋಡ್ , ಗೂಡ್‌ಶೆಡ್ ರಸ್ತೆ , ಬದ್ರಿಯಾ ರೋಡ್ , ಓಲ್ಡ್ ಪೋರ್ಟ್, ಜೆ.ಎಂ. ಕ್ರಾಸ್ ರೋಡ್ , ನೆಲ್ಲಿಕಾಯಿ ರೋಡ್ , ಸ್ಟೇಟ್‌ಬ್ಯಾಂಕ್ , ಕಸಾಯಿಗಲ್ಲಿ , ಗಾಂಧಿ ಸನ್ಸ್ , ಬೀಬಿ ಅಲಾಬಿ ರೋಡ್ , ಬಂದರ್ ಪೊಲೀಸ್ ಸ್ಟೇಷನ್ , ಮಿಷನ್ ಸ್ಟ್ರೀಟ್ , ಗೋಳಿಕಟ್ಟೆ ಬಜಾರ್ , ಬಾಂಬೆ ಲಕ್ಕಿ ಹೋಟೆಲ್ , ಟಿ.ಟಿ. ರಸ್ತೆ , ಅಜೀಜುದ್ದೀನ್ II ರಸ್ತೆ , ವಿವೇಕ್ ಮೋಟಾರ್ಸ್ , ಜುಲೇಖ ಟ್ರಸ್ಟ್ , ಮೈದಾನ್ 3 ಮತ್ತು ಕ್ರಾಸ್ 

ಇಲ್ಲೂ ಇರಲ್ಲ ಪವರ್!

ಸರ್ವೀಸ್ ಬಸ್‌ಸ್ಟ್ಯಾಂಡ್ , ಟೌನ್ ಹಾಲ್,  ತಾಲೂಕು ಪಂಚಾಯಿತಿ, ಸುಜೀರ್‌ ಕಾರ್ಸ್ ಟೈಲ್ಸ್, ನೆಲ್ಲಿಕಾಯಿ ರೋಡ್ , ಮಿನಿ ವಿಧಾನಸೌಧ , ಲೇಡಿಗೋಷನ್ ಆಸ್ಪತ್ರೆ , ಸೆಂಟ್ರಲ್ ಮಾರ್ಕೆಟ್ , ಜೆ.ಎಚ್.ಎಸ್. ರಸ್ತೆ , ಪಿ.ಎಂ. ರಾವ್ ರೋಡ್, ಗೌರಿಮಠ ರೋಡ್ , ಭವಂತಿ ಸ್ಟ್ರೀಟ್, ನಂದಾದೀಪ , ಶಾಂತದುರ್ಗ ಪಿ.ಎಂ. ರಾವ್ ರೋಡ್ , ಲೋವರ್ ವೆಂಕಟರಮಣ ಕಾರ್‌ಸ್ಟ್ರೀಟ್ ರೋಡ್ , ಫೆಲಿಕ್ಸ್ ಪೈ ಬಜಾರ್, ಗಣೇಶ್‌ ಬಜಾರ್‌ , ರಾಘವೇಂದ್ರ ಮಠ, ರೂಪವಾಣಿ ರೋಡ್ , ಪಿ.ಟಿ. ರಸ್ತೆ ಪುತ್ತು, ಪ್ರಭು ಲೇನ್ , ಬಾಲಂಭಟ್ ಹಾಲ್ , ವೆಂಕಟರಮಣ ಟೆಂಪಲ್ , ಟೆಂಪಲ್ ರಥಬೀದಿ , ಗಾಯತ್ರಿ ರೋಡ್ , ಫೀಲ್ಡ್‌ಸ್ಟ್ರೀಟ್ , ವೈಷ್ಣವಿ ಅಪಾರ್ಟ್‌ಮೆಂಟ್‌ , ಕಮಿಷನರ್ ಆಫೀಸ್ , ಎ.ಬಿ. ಶೆಟ್ಟಿ ಸರ್ಕಲ್ , ಮಂಗಳಾದೇವಿ ರಸ್ತೆ , ರೊಸಾರಿಯೋ , ರಾಜಲಕ್ಷ್ಮಿ ಟೆಂಪಲ್ ರಸ್ತೆ , ನ್ಯೂರಸ್ತೆ , ಮಹಾಲಿಂಗೇಶ್ವರ ಟೆಂಪಲ್ ರಸ್ತೆ , ಪಾಂಡೇಶ್ವರ ಕಟ್ಟೆ ಮತ್ತು ಸುತ್ತಲಿನ ಪ್ರದೇಶದಲ್ಲಿ ವ್ಯತ್ಯಯಗೊಳ್ಳಲಿದೆ.

ಹೆಚ್ಚಿನ ಮಾಹಿತಿಗಾಗಿ

ವಿದ್ಯುತ್ ಸಂಬಂಧಿತ ದೂರು, ಮಾಹಿತಿಗಾಗಿ ಉಚಿತ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸಬಹುದಾಗಿದೆ. 

Ads on article

Advertise in articles 1

advertising articles 2

Advertise under the article