
"ಜೈ ಶ್ರೀರಾಂ.. ಅಯೋಧ್ಯೆ ರಾಮ ಮಂದಿರಕ್ಕೆ ಹೋಗುವುದೇ ನನ್ನ ಗುರಿ": ಪಾಕ್ ಮಾಜಿ ಆಟಗಾರ
ದುಬೈ: ಟಿ20 ವಿಶ್ವಕಪ್ ನ ಸೋಮವಾರದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿತ್ತು. ಇದಾದ ಬೆನ್ನಿಗೆ ವಿರಾಟ್ ಕೊಹ್ಲಿ ಸೊಗಸಾದ ಆಟಕ್ಕೆ ವ್ಯಾಪಕ ಮೆಚ್ಚುಗೆಯಾಯಿತು. ಭಾರತೀಯ ಆಟಗಾರರಲ್ಲದೇ ಪಾಕಿಸ್ತಾನ ಸಹಿತ ಬೇರೆ ಬೇರೆ ವಿದೇಶಿ ಕ್ರಿಕೆಟ್ ದಿಗ್ಗಜರು ಕೊಹ್ಲಿ ಪಾತ್ರವನ್ನು ಹಾಡಿಹೊಗಳಿದರು.
ಈ ಮಧ್ಯೆ ಪಾಕಿಸ್ತಾನದ ಮಾಜಿ ಆಟಗಾರ, ಸ್ಪಿನ್ ಬೌಲರ್ ದ್ಯಾನಿಶ್ ಕನೇರಿಯಾ ಮಾಡಿರುವ ಟ್ವೀಟ್ ವೊಂದು ಭಾರೀ ಸದ್ದು ಮಾಡುತ್ತಿದೆ.
ಕ್ರಿಕೆಟ್ ಹೊರತಾಗಿ ಅವರು ಮಾಡಿರುವ ಟ್ವೀಟ್ ಭಾರೀ ಚರ್ಚೆಗೀಡಾಗಿದೆ. ದೀಪಾವಳಿ ಹಬ್ಬಕ್ಕೆ ಶುಭ ಕೋರಿರುವ ಟ್ವೀಟ್ ನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಬಗ್ಗೆಯೂ ಉಲ್ಲೇಖಿಸಿದ್ದು ಅಚ್ಚರಿಗೆ ಕಾರಣವಾಗಿದೆ.
" ಜೈ ಶ್ರೀರಾಂ, ವಿಶ್ವವ್ಯಾಪಿ ನೆಲೆಸಿರುವ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ನನ್ನ ಗುರಿ ರಾಮ ಮಂದಿರಕ್ಕೆ ಭೇಟಿ ನೀಡುವುದಾಗಿದೆ. ರಾಮ ಭಗವಾನ್ ನಾನು ಬರುವೆನು" ಅಂತಾ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಿರಾರು ಮಂದಿ ಈ ಪೋಸ್ಟ್ ರೀಟ್ವೀಟ್ ಮಾಡಿದ್ದಾರೆ.
ದ್ಯಾನಿಶ್ ಕನೇರಿಯಾ ಈ ಹಿಂದೆ ಪಾಕಿಸ್ತಾನ ತಂಡದಲ್ಲಿದ್ದ ಹಿಂದೂ ವಿರೋಧಿ ನೀತಿ ಕುರಿತಾಗಿ ಮಾತನಾಡಿದ್ದರು. ದ್ಯಾನಿಶ್ ಅವಧಿಯಲ್ಲಿ ಆಟವಾಡಿದ್ದ ಕೆಲವು ಆಟಗಾರರು ಈ ಕುರಿತು ಪ್ರತಿಕ್ರಿಯಿಸಿದ್ದರು.