ದೇಶದಲ್ಲಿ ಉತ್ತಮ ಹಿಂಗಾರು ಮಳೆಯ ಸಾಧ್ಯತೆ: ಹವಾಮಾನ ಇಲಾಖೆ
Thursday, October 13, 2022
ನವದೆಹಲಿ: ಅಕ್ಟೋಬರ್ ತಿಂಗಳಿಡೀ ದೇಶದ ನಾನಾ ಕಡೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.
ತಮಿಳುನಾಡಿನಲ್ಲಿ ಸದ್ಯ ಉತ್ತಮ ಮಳೆಯಾಗುತ್ತಿದೆ. ಕರ್ನಾಟಕದಲ್ಲೂ ಎರಡು ದಿನ ಮಳೆ ಇರಲಿದ್ದು, ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಇಲಾಖೆಯು ತಿಳಿಸಿದೆ.
ಮಹಾರಾಷ್ಟ್ರದ ಕರಾವಳಿ, ಗೋವಾ, ತಮಿಳುನಾಡು, ಕರ್ನಾಟಕದಲ್ಲಿ ಮಳೆ ಇರದೆ, ಮಹಾರಾಷ್ಟ್ರದ ಒಳ ಭಾಗದಲ್ಲಿ ಮಳೆಯು ಹರಡಿದಂತೆ ಬರಲಿದೆ. ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ಕೆಲ ದಿನಗಳ ಮಳೆ ಉಂಟಾಗಲಿದೆ. ಬುಧವಾರ ಸಿಕ್ಕಿಂ, ಕಾಲಿಂಪೋಂಗ್, ಜಲಫೈಗುರಿ, ಆಲಿಪುರ್ದಾರ್, ಡಾರ್ಜಿಲಿಂಗ್ ಮತ್ತು ಬಂಗಾಳದಲ್ಲಿ ಮಳೆ ಇರಲಿದೆ ಎಂದು ಮುನ್ಸೂಚನೆ ನೀಡಿದೆ.