-->
ಐಸಿಸಿ ಟಿ-20  RANKING: ಬೌಲಿಂಗ್ ದೀಪ್ತಿ ಅಮೋಘ ಸಾಧನೆ

ಐಸಿಸಿ ಟಿ-20 RANKING: ಬೌಲಿಂಗ್ ದೀಪ್ತಿ ಅಮೋಘ ಸಾಧನೆ


 ದುಬೈ: ಐಸಿಸಿ ಮಹಿಳಾ ಟ್ವೆಂಟಿ–20 ಕ್ರಿಕೆಟ್‌ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಭಾರತದ ದೀಪ್ತಿ ಅಮೋಘ ಸಾಧನೆ ಮೆರೆದಿದ್ದಾರೆ.  


ಅವರು ಮಂಗಳವಾರ ಪ್ರಕಟವಾದ ಪಟ್ಟಿಯಲ್ಲಿ ಜೀವನಶ್ರೇಷ್ಠ ಮೂರನೇ ಸ್ಥಾನಕ್ಕೆ ಮರಳಿದ್ದಾರೆ.


ಆಲ್‌ರೌಂಡರ್‌ಗಳ ವಿಭಾಗದಲ್ಲೂ ದೀಪ್ತಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ಸದ್ಯ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಉತ್ತಮ ಆಟವಾಡುತ್ತಿರುವುದರಿಂದ ಅವರ ರ‍್ಯಾಂಕಿಂಗ್‌ ಪ್ರಗತಿಗೆ ಕಾರಣವಾಗಿದೆ.


ಬ್ಯಾಟರ್‌ಗಳ ವಿಭಾಗದಲ್ಲಿ ದೀಪ್ತಿ 35ನೇ ಸ್ಥಾನದಲ್ಲಿದ್ದಾರೆ. ಭಾರತದ ಜೆಮಿಮಾ ರಾಡ್ರಿಗಸ್‌ ಆರನೇ ಮತ್ತು ಉಪನಾಯಕಿ ಸ್ಮೃತಿ ಮಂದಾನ ಎರಡನೇ ಸ್ಥಾನದಲ್ಲಿದ್ದಾರೆ. ಶಫಾಲಿ ವರ್ಮಾ ಎಂಟನೇ ಸ್ಥಾನಕ್ಕೆ ಜಾರಿದ್ದಾರೆ.


.

Ads on article

Advertise in articles 1

advertising articles 2

Advertise under the article