.jpg)
KADABA: ಕಡಬ ಪಟ್ಟಣ ಪಂಚಾಯತ್ `ಕೈ' ವಶ
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕಳಾರ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಮನ್ನಾ ಜಬೀನ್ ಜಯ ಗಳಿಸಿದರೆ, 8ನೇ ಪಿಜಕ್ಕಳ ವಾರ್ಡ್ ನಲ್ಲಿ ಬಿಜೆಪಿಯ ದಯಾನಂದ ಗೌಡ ಪಿ. ಕಾಂಗ್ರೆಸ್ ಅಭ್ಯರ್ಥಿ ಅಶ್ರಫ್ ಶೇಡಿಗುಂಡಿ ವಿರುದ್ಧ ಜಯ ಗಳಿಸಿದ್ದಾರೆ.
ಕೋಡಿಬೈಲು ವಾರ್ಡ್ ಬಿಜೆಪಿ ಅಭ್ಯರ್ಥಿ ಕುಸುಮಾ, ಮೂರಾಜೆ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ, ಪನ್ಯ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಫೈಜಲ್, ಕೋಡಿಂಬಾಳ ವಾರ್ಡ್ ಬಿಜೆಪಿ ಅಭ್ಯರ್ಥಿ ಅಕ್ಷತಾ ಮಣಿಮುಂಡ, ಬೆದ್ರಾಜೆ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಸಿ.ಜೆ ಸೈಮನ್, ದೊಡ್ಡಕೊಪ್ಪ ವಾರ್ಡ್ ಬಿಜೆಪಿ ಅಭ್ಯರ್ಥಿ ಗುಣವತಿ, ಮಾಲೇಶ್ವರ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಹನೀಫ್, ಮಜ್ಜಾರು ವಾರ್ಡ್ ಬಿಜೆಪಿ ಅಭ್ಯರ್ಥಿ ಮೋಹನ್, ಕಡಬ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ನೀಲಾವತಿ ಶಿವರಾಮ, ಪುಳಿಕುಕ್ಕು ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ, ಪಣೆಮಜಲ್ ಕಾಂಗ್ರೆಸ್ ಅಭ್ಯರ್ಥಿ ರೋಹಿತ್ ಗೌಡ ಗೆಲುವು ಸಾಧಿಸಿದ್ದಾರೆ.
ಗೆಲುವಿನ ಹಿಂದಿನ ಮಾಸ್ಟರ್ ಮೈಂಡ್ ಯಾರು ಗೊತ್ತಾ?
ಕಡಬ ಪಟ್ಟಣ ಪಂಚಾಯತ್ ಕಾಂಗ್ರೆಸ್ ವಶಕ್ಕೆ ಕಾರಣವಾಗಿರುವ ಮಾಸ್ಟರ್ ಮೈಂಡ್ ಮತ್ಯಾರೂ ಅಲ್ಲ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್. ಹೌದು ಈ ಹಿಂದೆ ಕಡಬ ಪಂಚಾಯತ್ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಬಳಿಕ ಕಡಬ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿತು. ಇದೀಗ ಮೊದಲ ಬಾರಿಗೆ ಕಡಬ ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆದಿದೆ. ಇದರಲ್ಲಿ ಕಠಿಣಶ್ರಮವಹಿಸಿ ಖುದ್ದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೇ ಅಖಾಡಕ್ಕಿಳಿದು ಅಲ್ಲಿನ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಲು ಕಾರಣರಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿಕೊಂಡಿದ್ದಾರೆ. ಹರೀಶ್ ಕುಮಾರ್ ಅವರು ಈಗಾಗ್ಲೇ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದೆ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದು, ಅಲ್ಲಿಯೂ ಯಶಸ್ಸಿನ ಹಾದಿಗೆ ಮುನ್ನುಡಿ ಇಡಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಮಾತುಗಳನ್ನಾಡುತ್ತಿದ್ದಾರೆ.