-->
PUTTUR: ಶಾಸಕ ಅಶೋಕ್ ರೈ ಅವರದ್ದು ಬಿಜೆಪಿ ಸಂಸ್ಕೃತಿ: SDPI ಕಿಡಿ

PUTTUR: ಶಾಸಕ ಅಶೋಕ್ ರೈ ಅವರದ್ದು ಬಿಜೆಪಿ ಸಂಸ್ಕೃತಿ: SDPI ಕಿಡಿ


ಪುತ್ತೂರು:
ಪುತ್ತೂರಿನಲ್ಲಿ ಲವ್ ಸೆಕ್ಸ್ ದೋಖಾ ಪ್ರಕರಣಕ್ಕೆ ಸಂಬಂಧಿಸಿ ಇಂದು ಸಂತ್ರಸ್ತೆಯ ಮನೆಗೆ ಎಸ್ ಡಿಪಿಐ ನಿಯೋಗ ಹಾಗೂ ವುಮೆನ್ ಇಂಡಿಯಾ ಮೂವ್ ಮೆಂಟ್ ಜಂಟಿಯಾಗಿ ಭೇಟಿ ನೀಡಿದರು. 

ಈ ವೇಳೆ ಸಂತ್ರಸ್ತೆ ಹಾಗೂ ಮಗುವನ್ನು ನೋಡಿದ ಬಳಿಕ ನಿಮಗೆ ನ್ಯಾಯ ಸಿಗುವ ವರೆಗೂ ನಿಮ್ಮ ಜೊತೆ ಎಸ್ ಡಿಪಿಐ ಇರುವುದಾಗಿ ಸಂತ್ರಸ್ತೆಯ ತಾಯಿಗೆ ಧೈರ್ಯ ಹೇಳಿದರು. ಬಳಿಕ ಮಾಧ್ಯಮದ ಜೊತೆ ಎಸ್ ಡಿಪಿಐ ರಾಜ್ಯ ಉಪಾಧ್ಯಕ್ಷೆ ಶಾಹಿದ ತಸ್ಲೀಮ್ ಮಾತನಾಡಿ, ಭೇಟಿ ಬಚಾವೋ ಭೇಟಿ ಪಡಾವೋ ಅಂತೆಲ್ಲ ಹೇಳ್ತಾರೆ. ಆದ್ರೆ ಮಹಿಳೆಗೆ ಅನ್ಯಾವಾದಾಗ ನ್ಯಾಯದ ಪರವಾಗಿ ಇರದೆ ಪ್ರಭಾವಿಗಳ ಪರ ನಿಂತು ಬೆಂಬಲ ನೀಡೋದು ಈಗಿನ ಕೆಲ ವರ್ಷಗಳಿಂದ ನಡೀತಾ ಬರ್ತಾ ಇದೆ. ಆರೋಪಿಗಳ ಪರವಾಗಿ ಬಿಜೆಪಿ ಸಂಘಪರಿವಾರ ನಿಲ್ಲೋದ್ರಿಂದ ಇಂತಹ ಘಟನೆಗಳು ಮರಕಳುಹಿಸುತ್ತಾ ಇದೆ ಎಂದು ಅವರು ಕಿಡಿಕಾರಿದರು. 

ಭೂಮಾತೆ, ಗೋತಾಯಿ, ಮಾತೆಯ ಸಂಸ್ಕೃತಿ ನಮ್ಮದು ಅಂತೆಲ್ಲ ಹೇಳಿ ನೈಜ ಮಾತೆಗೆ ಅನ್ಯಾವಾದಾಗ ಬೆಂಬಲವಾಗಿ ನಿಲ್ಲದೆ, ಪ್ರಭಾವಿಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಎಲ್ಲಿಯವರೆಗೂ ಇದು ಮುಂದುವರಿದಿದೆ ಅಂದ್ರೆ ಸಂತ್ರಸ್ತೆಯ ತಾಯಿ ವಿವಿಧ ಹಿಂದುತ್ವ ನಾಯಕರ ಭೇಟಿ ಮಾಡಿದರೂ ಕೂಡ ಬೆಂಬಲ ಸಿಕ್ಕಿಲ್ಲ. ಕೊನೆಗೆ ಎಸ್ ಡಿಪಿಐ ಸಂತ್ರಸ್ತೆಯ ಪರವಾಗಿ ಪ್ರತಿಭಟಿಸಿದರ ಪರಿಣಾಮ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಆದ್ರೆ ಕೆಲವರು ಈ ವಿಚಾರವನ್ನ ರಾಜಕೀಯ ಮೈಲೇಜ್ ಪಡೆಯಲು ಬಂದಿದ್ದಾರೆ. ಎಸ್ ಡಿಪಿಐ ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಯಾರಿಗೆ ಅನ್ಯಾಯವಾಗುತ್ತೋ ಅವರ ಪರವಾಗಿ ನಿಲ್ಲುತ್ತೆ ಎಂದು ಹೇಳಿದರು. 

ಇನ್ನು ಇಂತಹ ಘಟನೆಗಳು ನಡೆದಾಗ ಇಡೀ ಸಮಾಜ ಒಂದಾಗಿ ಯಾರಿಗೆ ಅನ್ಯಾಯ ಆಗಿದೋ ಅವರ ಪರವಾಗಿ ನಿಲ್ಲಬೇಕು. ಬ್ರಾಹ್ಮಣ್ಯವನ್ನ ಸಂರಕ್ಷಿಸಲು ಸಂಘ ಪರಿವಾರ ಮತ್ತು ಬಿಜೆಪಿ ಕೆಲಸ ಮಾಡುತ್ತಿದೆ. ಇಲ್ಲಿ ಜಾತಿ, ಧರ್ಮ ನೋಡಿಕೊಂಡು ಮೇಲ್ವರ್ಗಕ್ಕೊಂದು ನ್ಯಾಯ ಕೆಲ ವರ್ಗಕ್ಕೊಂದು ನ್ಯಾಯದ ರೀತಿ ಇದೆ. ಅದು ನಿಲ್ಲಬೇಕು. ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ. ಹಿಂದೂ ಧರ್ಮ ಅಂದ್ರೆ ಸರ್ವೋ ಜನ ಸುಖಿನೋ ಭವಂತೋ, ವಸುದೈವ ಕುಟುಂಬಕಂ ಅಂತ ಹೇಳುವ ಧರ್ಮ. ಅದನ್ನ ಈ ಹಿಂದುತ್ವವಾದಿಗಳು ಜಾತಿ ನೋಡಿಕೊಂಡು ಬ್ರಾಹ್ಮಣ್ಯವನ್ನು ಸಂರಕ್ಷಿಸುವ ಸಲುವಾಗಿ ಈ ರೀತಿ ಮಾಡುತ್ತಾ ಇದ್ದಾರೆ ಎಂದು ಆರೋಪಿಸಿದರು. 

ನಿಜವಾಗಿ ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಬೇಕು. ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡಬೇಕು. ಇದನ್ನ ರಾಜಕೀಯವಾಗಿ ನೋಡುವುದು ಬೇಡ. ಓರ್ವ ಮಹಿಳೆಗೆ ಆದ ಅನ್ಯಾಯ ಅಂತ ತಿಳಿದುಕೊಂಡು ಎಲ್ಲರೂ ಬೆಂಬಲವಾಗಿ ನಿಂತು ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. 

ಶಾಸಕ ಅಶೋಕ್ ರೈ ಬಿಜೆಪಿಯಿಂದ ಬೆಳೆದು ಬಂದವರು!!!

ಪುತ್ತೂರಿನ ಶಾಸಕರು ಬಿಜೆಪಿಯಿಂದ ಬೆಳೆದು ಬಂದವರು. ಅವರ ಸಂಸ್ಕೃತಿ ಕೂಡ ಬಿಜೆಪಿ ಸಂಸ್ಕೃತಿ ಎಂದು ಅಶೋಕ್ ರೈ ಅವರನ್ನ ಎಸ್ ಡಿಪಿಐ ರಾಜ್ಯ ಉಪಾಧ್ಯಕ್ಷೆ ಕುಟುಕಿದ್ದಾರೆ. ಇಲ್ಲಿ ಮನುಸ್ಮೃತಿಯನ್ನು ಜಾರಿಗೊಳಿಸಲು ಎಲ್ಲರೂ ಶ್ರಮಿಸುತ್ತಿದ್ದಾರೆ. ಮನುಸ್ಮೃತಿಯಲ್ಲಿ ಮಹಿಳೆಗೆ ಯಾವುದೇ ಸ್ವಾತಂತ್ರ್ಯ ಇಲ್ಲ, ಹಕ್ಕು ಇಲ್ಲ, ಎರಡನೇ ದರ್ಜೆಯವಳಾಗಿ ಜೀವಿಸಬೇಕು. ಹಾಗಾಗಿಯೇ ಶಾಸಕ ಅಶೋಕ್ ರೈ ಅವರು ಕೇಸ್ ಹಿಂಪಡೆಯಿರಿ ಅಂತ ಸಂತ್ರಸ್ತೆಯ ತಾಯಿಯವರಲ್ಲಿ ಹೇಳಿದ್ದಾರೆ. ಆ ಒಂದು ಒತ್ತಡ ಅಥವಾ ಆಶಾವಾದದ ಮೇರೆಗೆ ಸಂತ್ರಸ್ತೆಯ ತಾಯಿ ಕೇಸ್ ಅನ್ನು ಹಿಂಪಡೆದಿದ್ದರು ಎಂದು ಅವರು ಹೇಳಿದರು.  

 

Ads on article

Advertise in articles 1

advertising articles 2

Advertise under the article