-->
'ಮೈಸೂರು ಪಾಕ್'ನಲ್ಲಿರೋದು ಪಾಕಿಸ್ತಾನವೋ!? ಡಿಕ್ಷನರಿಯಲ್ಲಿದೆ ಇನ್ನೂ ಹಲವು ಬಗೆಯ ಅರ್ಥ!

'ಮೈಸೂರು ಪಾಕ್'ನಲ್ಲಿರೋದು ಪಾಕಿಸ್ತಾನವೋ!? ಡಿಕ್ಷನರಿಯಲ್ಲಿದೆ ಇನ್ನೂ ಹಲವು ಬಗೆಯ ಅರ್ಥ!


ಮಂಗಳೂರು: ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಕೃತ್ಯದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಹೈದರಾಬಾದ್ ಮೂಲದ 'ಕರಾಚಿ' ಹೆಸರಿನ ಬೇಕರಿಯ ಹೆಸರು ಬದಲಾಯಿಸುವಂತೆ ವಾರದ ಹಿಂದಷ್ಟೇ ಹಿಂದುತ್ವ ಸಂಘಟನೆಗಳು ಬೆದರಿಕೆಯೊಡ್ಡಿತ್ತು. ಇದೀಗ ಸಿಹಿತಿಂಡಿ ಮೈಸೂರು ಪಾಕ್ ಜೊತೆಗೆ 'ಪಾಕ್' ಸೇರಿಕೊಂಡಿದೆ ಎಂದ ಮಾತ್ರಕ್ಕೆ ರಾಜಸ್ತಾನದ ಸಿಹಿ ವ್ಯಾಪಾರಸ್ಥರು ಪಾಕ್ ಬದಲಿಗೆ 'ಮೈಸೂರು ಶ್ರೀ' ಎಂದು ಬದಲಾಯಿಸಿದ್ದಾರೆ.

'ಪಾಕ್‌’ ಎಂದರೆ ಪಾಕಿಸ್ತಾನವೇ?
ಅಷ್ಟಕ್ಕೂ ಮೈಸೂರು ಪಾಕ್‌ನಲ್ಲಿರುವ 'ಪಾಕ್‌‌' ಎಂದರೆ ಪಾಕ ಅನ್ನೋದು ಕನ್ನಡಿಗರಿಗೆ ಗೊತ್ತಿರುವ ವಿಚಾರ. ಅದರ ಹೊರತಾಗಿಯೂ ಪಾಕ್‌ಗೆ ಡಿಕ್ಷನರಿಯಲ್ಲಿ ಬೇರೆ ಬೇರೆ ಅರ್ಥಗಳಿವೆ. ಕ್ರೆಖ್ತಾ ಡಿಕ್ಷನರಿ ಪ್ರಕಾರ ‘ಪಾಕ್‌’ ಪದವು ಪರ್ಷಿಯಾ ಮೂಲದ್ದು. ಇದರ ಅರ್ಥ ‘ಸಿಹಿತಿನಿಸು’ ಅಥವಾ ‘ಮಿಠಾಯಿ’. ಇದರೊಂದಿಗೆ ಈ ಪದಕ್ಕೆ ‘ಶುದ್ಧ, ಸ್ವಚ್ಛ ಮತ್ತು ಪವಿತ್ರ’ ಎನ್ನುವ ಅರ್ಥವೂ ಇದೆ. ಹಿಂದೂ ಪದಕೋಶ ‘ಶಬ್ದಕೋಶ. ಕಾಂ’ ಪ್ರಕಾರ, ‘ಪಾಕ್‌’ ಎಂದರೆ, ‘ಅಡುಗೆ ಮಾಡುವುದು’ ಎಂದರ್ಥ.

Ads on article

Advertise in articles 1

advertising articles 2

Advertise under the article