
WAQF BILL: ಕರ್ನಾಟಕದಲ್ಲಿ ಅತೀ ದೊಡ್ಡ ವಕ್ಫ್ ತಿದ್ದುಪಡಿ ವಿರೋಧಿ ಹೋರಾಟಕ್ಕೆ ಮಂಗಳೂರಿನಲ್ಲಿ ಮೆಗಾ ಪ್ಲಾನ್!!
ಮಂಗಳೂರು: ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿಸಿ ವಕ್ಫ್ ತಿದ್ದುಪಡಿ ವಿರುದ್ಧ ಬೃಹತ್ ಹೋರಾಟಕ್ಕೆ ಮಂಗಳೂರು ಸಜ್ಜುಗೊಂಡಿದೆ. ಹೌದು ಕರ್ನಾಟಕದಲ್ಲಿ ಅತೀ ದೊಡ್ಡ ವಕ್ಫ್ ತಿದ್ದುಪಡಿ ವಿರೋಧಿ ಹೋರಾಟಕ್ಕೆ ಮಂಗಳೂರಿನಲ್ಲಿ ಮೆಗಾ ಪ್ಲಾನ್ ರೂಪಿಸಲಾಗಿದೆ. ಎ.18ರಂದು ಶುಕ್ರವಾರ ಮಂಗಳೂರಿನ ಅಡ್ಯಾರ್ ಕಣ್ಣೂರು ಶಾ ಮೈದಾನದಲ್ಲಿ ಹೋರಾಟಕ್ಕೆ ರೂಪುರೇಷೆ ಹಾಕಿಕೊಳ್ಳಲಾಗಿದೆ.
ಕಟ್ಟರ್ ಮುಸ್ಲಿಂ ಬಾಹುಳ್ಯದ ಕರಾವಳಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರಿಸಿ ದೊಡ್ಡ ಪ್ರತಿಭಟನೆ ಮಾಡಬೇಕೆಂದು ಮಸೀದಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ಎಲ್ಲಾ ಊರುಗಳಿಂದ ಮುಸ್ಲಿಂಮರು ಗರಿಷ್ಟ ಮಟ್ಟದಲ್ಲಿ ಪ್ರತಿಭಟನೆಗೆ ಸೇರಬೇಕು. ಧಾರ್ಮಿಕ ಮುಖಂಡರು, ವಿದ್ವಾಂಸರ ನೇತೃತ್ವದಲ್ಲಿ ನಡೆಯುವ ಈ ಬೃಹತ್ ಹೋರಾಟದಲ್ಲಿ ದ.ಕ. ಉಡುಪಿ, ಚಿಕ್ಕಮಗಳೂರು, ಹಾಸನ ಭಾಗದ ಲಕ್ಷಾಂತರ ಜನರು ಸೇರುವ ಸಾಧ್ಯತೆ ಇದೆ. ಸದ್ಯ ಕರ್ನಾಟಕ ಉಲಮಾ ಸಮನ್ವಯ ಸಮಿತಿ ಈ ಬೃಹತ್ ಹೋರಾಟಕ್ಕೆ ಕರೆ ನೀಡಿದ್ದು, ಕರ್ನಾಟಕದ ಪ್ರಮುಖ ಧಾರ್ಮಿಕ ನಾಯಕರಾದ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಮತ್ತು ಖಾಝಿ ಶೈಖುನಾ ಮಾಣಿ ಉಸ್ತಾದ್ ನೇತೃತ್ವ ವಹಿಸಿಕೊಂಡಿದ್ದಾರೆ. ಹಾಗಾಗಿ ನಾಲ್ಕು ಜಿಲ್ಲೆಗಳ ಎಲ್ಲಾ ಮೊಹಲ್ಲಾಗಳಿಗೆ ಧಾರ್ಮಿಕ ನಾಯಕರು ಸುತ್ತೋಲೆ ಹೊರಡಿಸಿದ್ದಾರೆ.
ಆದಷ್ಟು ಎಲ್ಲಾ ಊರುಗಳಿಂದ ಗರಿಷ್ಟ ಮಟ್ಟದಲ್ಲಿ ಜನರು ಬರುವಂತೆ ಸಮಿತಿ ಕರೆ ನೀಡಿದೆ. ಇನ್ನು ಶುಕ್ರವಾರ ಮಸೀದಿ ಪ್ರಾರ್ಥನೆ ಬಳಿಕ ಎಲ್ಲಾ ಮುಸ್ಲಿಂ ಜನತೆ ಪ್ರತಿಭಟನೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಮಂಗಳೂರು ಸಮಾವೇಶದ ಬಳಿಕ ಬೆಂಗಳೂರು, ಹುಬ್ಬಳಿಯಲ್ಲಿ ಪ್ರತಿಭಟನೆಗೆ ಪ್ಲಾನ್ ಮಾಡಲಾಗಿದೆ. ಅದಲ್ಲದೇ ಇದೇ ಮೊದಲ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಧಾರ್ಮಿಕ ಪಂಡಿತರು ಭಾಗಿಯಾಗುವ ಸಾಧ್ಯತೆ ಇದೆ. ಯಾಕಂದ್ರೆ ಹೊಸ ತಿದ್ದುಪಡಿ ಕಾಯ್ದೆಯಿಂದ ಕೆಲ ಇಸ್ಲಾಮಿಕ್ ಧಾರ್ಮಿಕ ಕೇಂದ್ರಗಳಿಗೆ ಆತಂಕದ ಆರೋಪ, ಹೀಗಾಗಿ ಇದೇ ಮೊದಲ ಬಾರಿಗೆ ಭಾರೀ ಸಂಖ್ಯೆಯಲ್ಲಿ ಹೋರಾಟಕ್ಕೆ ಧಾರ್ಮಿಕ ಪಂಡಿತರು ಧುಮುಕಿದ್ದಾರೆ. 2020ರಲ್ಲಿ ಇದೇ ಶಾ ಗಾರ್ಡನ್ ಮೈದಾನದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆದಿತ್ತು. ಇದೀಗ ವಕ್ಫ್ ತಿದ್ದುಪಡಿ ವಿರುದ್ಧ ಮತ್ತೊಂದು ಬೃಹತ್ ಶಕ್ತಿ ಪ್ರದರ್ಶನಕ್ಕೆ ಮಂಗಳೂರು ಸಜ್ಜುಗೊಂಡಿದೆ.