ಪುತ್ತೂರು: ಹಿಂದೂ ದಂಪತಿಗೆ ತಲವಾರು ತೋರಿಸಿ ಬೆದರಿಕೆ: ಬಿಜೆಪಿ ಮುಖಂಡನ ವಿರುದ್ಧ FIR!
Saturday, April 26, 2025
ಪುತ್ತೂರು: ಹಿಂದೂ ಸಂಘಟನೆ ಹಾಗೂ ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ ಹಿಂದೂ ದಂಪತಿಗೆ ತಲವಾರು ಹಿಡಿದು ಬೆದರಿಕೆಯೊಡ್ಡಿದ ಪ್ರಕರಣ ವಿಟ್ಲ ಠಾಣೆಯಲ್ಲಿ ದಾಖಲಾಗಿದೆ.
ದೂರುದಾರ ಬಂಟ್ವಾಳ ತಾಲೂಕಿನ ಹರೀಶ್ ಅವರು ನೀಡಿದ ದೂರಿನಂತೆ, ಎಪ್ರಿಲ್ 16 ರಂದು ಮನೆಯಲ್ಲಿ ತನ್ನ ಪತ್ನಿಯೊಬ್ಬಳೇ ಇದ್ದ ಸಮಯದಲ್ಲಿ ಮನೆಗೆ ಬಂದಿದ್ದ ಹಸಂತಡ್ಕ, "ನಿನ್ನ ಗಂಡನಲ್ಲಿ ಸಾರಡ್ಕದ ಪೆಟ್ರೋಲ್ ಪಂಪ್ ಬಿಟ್ಟು ಕೊಡುವಂತೆ ಹೇಳು" ಎಂದು ಹರೀಶ್ ಪತ್ನಿ ಶ್ರೀದೇವಿ ಅವರಿಗೆ ಬೆದರಿಕೆಯೊಡ್ಡಿದ್ದಾಗಿ ಹೇಳಲಾಗಿದೆ. ಅಷ್ಟೇ ಅಲ್ಲದೇ, ಎಪ್ರಿಲ್ 19 ರಂದು ಮತ್ತೊಮ್ಮೆ ಹರೀಶ್ ಹಾಗೂ ಶ್ರೀದೇವಿ ದಂಪತಿಗೆ ತಲ್ವಾರ್ ಹಿಡಿದುಕೊಂಡು ಬಂದು ಬೆದರಿಕೆಯೊಡ್ಡಿದ್ದಾಗಿ ಆರೋಪಿಸಲಾಗಿದೆ. ಈ ಕುರಿತು ನ್ಯಾಯಾಲಯದ ಆದೇಶದಂತೆ ವಿಟ್ಲ ಠಾಣೆಯಲ್ಲಿ ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹರೀಶ್ ಪತ್ನಿ ಶ್ರೀದೇವಿ ಹಾಗೂ ಮುರಳೀಕೃಷ್ಣ ಹಸಂತಡ್ಕ ಸಾರಡ್ಕದ HP ಪೆಟ್ರೋಲ್ ಪಂಪ್ನಲ್ಲಿ ಪಾಲುದಾರಿಕೆ ಹೊಂದಿದ್ದು, ಇದೇ ವಿಚಾರವಾಗಿ ಬೆದರಿಕೆಯೊಡ್ಡಿರುವುದಾಗಿ ತಿಳಿದುಬಂದಿದೆ.