-->
PUTTUR: ಅರಸು ಮುಂಡ್ಯತ್ತಾಯನ ಮಣ್ಣಿನಲ್ಲಿ ನಡೆಯೋದಿಲ್ಲ ಕಳ್ಳತನ, ಅನಾಚಾರ!!

PUTTUR: ಅರಸು ಮುಂಡ್ಯತ್ತಾಯನ ಮಣ್ಣಿನಲ್ಲಿ ನಡೆಯೋದಿಲ್ಲ ಕಳ್ಳತನ, ಅನಾಚಾರ!!


ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಪಾಂಗಳಾಯ ಎಂಬಲ್ಲಿ ನಿರ್ವಹಣೆ ಇಲ್ಲದ ಅಡಿಕೆ ತೋಟದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ಅಡಿಕೆ ಕದಿಯಲು ಬಂದು ಅಡಿಕೆ ಮರದಿಂದ ಬಿದ್ದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಸರಿಸುಮಾರು 45 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. 


ಅಡಿಕೆ ಮರ ಅರ್ಧದಿಂದ ಮುರಿದು ವ್ಯಕ್ತಿಯ ಮೇಲೆಯೇ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸಾವನ್ನಪ್ಪಿರುವ ವ್ಯಕ್ತಿ ಸ್ಥಳೀಯ ಪರಿಸರದಲ್ಲಿರುವವನೇ ಆಗಿರಬಹುದು ಎಂದು ಅಂದಾಜಿಸಲಾಗಿದೆ. 

ಇವೆಲ್ಲದರ ನಡುವೆ ವಿಶೇಷವಾಗಿ ಗಮನಿಸಬೇಕಾದದ್ದು, ಇದು ಪಾಂಗಳಾಯ ಅರಸು ಮುಂಡ್ಯತ್ತಾಯ ದೈವಸ್ಥಾನದ ಪರಿಸರದಲ್ಲಿರುವ ಅಡಿಕೆ ತೋಟದಲ್ಲಿ ನಡೆದಿರುವಂತ ಘಟನೆ. ಈ ಪವರ್ ಫುಲ್ ದೈವದ ವ್ಯಾಪ್ತಿಯಲ್ಲಿ ಕಳ್ಳತನ, ಅನಾಚಾರಕ್ಕೆ ಅವಕಾಶವಿಲ್ಲ ಅನ್ನೋ ದಟ್ಟವಾದ ನಂಬಿಕೆ ಇದೆ. ನಂಬಿಕೆಗೆ ವಿರುದ್ಧವಾಗಿ ನಡೆದಲ್ಲಿ ದೈವವೇ ತನ್ನ ಪವಾಡವನ್ನ ತೋರಿಸಿದ ಅದೆಷ್ಟೋ ನಿದರ್ಶನಗಳು ಇವೆ. ಹಾಗೆಯೇ ಕದಿಯಲು ಬಂದಿರುವ ವ್ಯಕ್ತಿ ಅಡಿಕೆ ಮರ ಮುರಿದು ಸಾವನ್ನಪ್ಪಿದ್ದಾನೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇನ್ನು ಪಾಂಗಳಾಯದಲ್ಲಿ ನೆಲೆ ನಿಂತಿರುವ ಅರಸು ಮುಂಡ್ಯತ್ತಾಯ ದೈವವು ಪುತ್ತೂರಿನ ಕಾವಲುಗಾರನು ಹೌದು. ಪಾಂಗಳಾಯದ ಪರಿಸರದಲ್ಲಿ ಯಾವುದೇ ಕಷ್ಟ ಅಂತ ಬಂದ್ರೂ ಭಕ್ತಿಯಿಂದ ಪೂಜಿಸಿದ್ರೆ ಅರಸು ಮುಂಡ್ಯತ್ತಾಯ ಭಕ್ತರ ಇಷ್ಟಾರ್ಥಗಳನ್ನ ಈಡೇರಿಸುತ್ತಾನೆ. ಅಲ್ಲಿ ಯಾವುದೇ ಕಳ್ಳತನ, ಅನಾಚಾರಕ್ಕೆ ಅವಕಾಶವಿಲ್ಲ. ಈ ದೈವವನ್ನ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಎರಡನೇ ದಂಡನಾಯಕ ಅಂತ ಕರೆಯುತ್ತಾರೆ. 

Ads on article

Advertise in articles 1

advertising articles 2

Advertise under the article