-->
PUTTUR CLUB: ರಾಜ್ಯದ 2ನೇ ಅತ್ಯಾಧುನಿಕ ಸಿಂಥೆಟಿಕ್ ಟೆನ್ನಿಸ್ ಕೋರ್ಟ್ ಪುತ್ತೂರಿನಲ್ಲಿ ಸಿದ್ಧ!!

PUTTUR CLUB: ರಾಜ್ಯದ 2ನೇ ಅತ್ಯಾಧುನಿಕ ಸಿಂಥೆಟಿಕ್ ಟೆನ್ನಿಸ್ ಕೋರ್ಟ್ ಪುತ್ತೂರಿನಲ್ಲಿ ಸಿದ್ಧ!!


ಪುತ್ತೂರು: ಮರೀಲ್‍ನಲ್ಲಿರುವ `ದಿ ಪುತ್ತೂರು ಕ್ಲಬ್‍'ನಲ್ಲಿ 30ಸಾವಿರಚದರ ಅಡಿಯ ವಿಸ್ತೀರ್ಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ವಿವಿಧ ಹೊಸ ಸೌಲಭ್ಯಗಳಾದ ಸಿಂಥೆಟಿಕ್ ಟೆನ್ನಿಸ್ ಕೋರ್ಟ್, 1ಸಾವಿರ ಜನರ ಸಾಮಥ್ರ್ಯದ ವಿಶಾಲ ಹಾಲ್, 200 ಜನ ಸಾಮಥ್ರ್ಯದ 2400 ಚದರ ಅಡಿಯ ಎಸಿ ಹಾಲ್,  ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್, ಹವಾನಿಯಂತ್ರಿತ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.


ಟೆನ್ನಿಸ್ ಕೋರ್ಟ್ ಉದ್ಘಾಟಿಸಿ, ಸಭಾ ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ಅವರು ಮಾತನಾಡಿ, ಕ್ಲಬ್ ಪ್ರಾರಂಭ ಮಡುವುದು ಸುಲಭ. ಆದರೆ ಪ್ರಾರಂಭಿಕ ಹಂತದಿಂದ ಕಡೆಯ ಸದಸ್ಯರ ವಿಶ್ವಾಸಗಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಡಾ. ದೀಪಕ್ ರೈ ಮತ್ತು ಅವರ ತಂಡ ಸದಸ್ಯರೆಲ್ಲರ ವಿಶ್ವಾಸ ಗಳಿಸಿ ತುಂಬಾ ಅತ್ಯುತ್ತಮ ಕಾರ್ಯಕ್ರಮ ಮಾಡಿದ್ದಾರೆ. ಸಮಾಜ ಮೆಚ್ಚುವ ಕೆಲಸ ಮಾಡಲು ಕ್ಲಬ್‍ನಲ್ಲಿ ವಿಶಾಲ ಅವಕಾಶವಿದೆ. ಅದನ್ನು ಬಳಸಿಕೊಳ್ಳಬೇಕು. ಕ್ಲಬ್‍ನಲ್ಲಿ ಚಟುವಟಿಕೆಗಳು ದುರುಪಯೋಗ ಆಗಬಾರದು ಎಂದು ಸರಕಾರ ಕ್ಲಬ್ ಕಮಿಟಿ ರಚಿಸಿದೆ. ಅದರಲ್ಲಿ ನಾನು ಇದ್ದೇನೆ. ನಾವು ಕ್ಲಬ್‍ಗಳಿಗೆ ಸಲಹೆ ನೀಡುತ್ತೇವೆ. ಹಾಗಾಗಿ ಕೆಲವು ವಿಚಾರದಲ್ಲಿ ಕ್ಲಬ್‍ನ ಅಧ್ಯಕ್ಷರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದರು. ಸ್ವಾಸ್ತ ಸಮಾಜ ನಮ್ಮ ಹಿರಿಯರು ಕಟ್ಟಿದ್ದಾರೆ. ಅಂತಹ ಸ್ವಾಸ್ತ ಸಮಾಜದ ಚಟುವಟಿಕೆಗಳು ಕ್ಲಬ್‍ನಲ್ಲಿ ನಿರಂತರ ನಡೆಯಬೇಕು ಎಂದ ಅವರು ನಾವೆಲ್ಲ ನಮ್ಮನಮ್ಮ ಕಾರ್ಯಕ್ಷೇತ್ರದಲ್ಲಿ ಕಾಯ, ವಾಚ, ಮನಸ ನಿಷ್ಠೆ, ಪ್ರಾಮಾಣಿಕತೆಯಿಂದ ನಮ್ಮ ನಮ್ಮ ಕೆಲಸಗಳನ್ನು ಸಮಾಜ ಸೇವೆಗಾಗಿ ಮಾಡಿದಾಗ ಇಂತಹ ಕ್ಲಬ್‍ಗಳನ್ನು ಹುಟ್ಟು ಹಾಕಲು ಸಾಧ್ಯ ಆಗುತ್ತದೆ. ಈ ಕ್ಲಬ್‍ಗಳಿಂದ ಸಮಾಜಮುಖಿ ಕೆಲಸ ಮಾಡಲು ಸಾಧ್ಯ ಎಂದರು.

1ಸಾವಿರ ಜನ ಸಾಮಾಥ್ರ್ಯದ ವಿಶಾಲಾ ಹಾಲ್ ಅನ್ನು ಉದ್ಘಾಟಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಸುಮಾರು 99 ಕ್ಲಬ್‍ಗಳ ಒಡಂಬಡಿಕೆಯೊಂದಿಗೆ ಬಹಳ ವೇಗವಾಗಿ ರಾಜ್ಯದಲ್ಲಿ ಬೆಳೆದಿರುವ ಕ್ಲಬ್ ಅದು ಪುತ್ತೂರಿನ ಪುತ್ತೂರು ಕ್ಲಬ್. ಹಾಗಾಗಿ ಡಾ. ದೀಪಕ್ ರೈ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಬೇಕೆಂದರು. ಮನುಷ್ಯ ಒತ್ತಡದ ಮಧ್ಯೆ ನೆಮ್ಮದಿಯಿಂದ ಬದುಕುವ ಸಂದರ್ಭ ಶಾಂತವಾಗಿ ಯೋಚನೆ ಮಾಡಲು ಪ್ರಶಾಂತವಾದ ವಾತಾವರಣ ಹೊಂದಿರುವ ಸ್ಥಳ ಹುಡಕುವ ಕಾಲಗಟ್ಟದಲ್ಲಿ ಅವರ ಇಂತಹ ಕ್ಲಬ್ ಮಹತ್ವ ಬೀರುತ್ತದೆ. ತಮ್ಮ ಕಾರ್ಯದ ಒತ್ತಡದ ಮಧ್ಯೆ ಪ್ರಶಾಂತವಾಗಿರುವುದಕ್ಕೆ ಮಂಗಳೂರಿನಲ್ಲಿ ಇರುವಂತಹದ್ದು ಇವತ್ತು ಪುತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ಮಾಡಿರುವುದು ವಿಶೇಷತೆಯಾಗಿದೆ. ಈ ಕ್ಲಬ್ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.

ಇದೆ ಸಂದರ್ಭದಲ್ಲಿ ಕ್ಲಬ್‍ನ ನೂತನ ಸೌಲಭ್ಯಗಳ ಕಾಮಗಾರಿಗಳ ವಿನ್ಯಾಸ ರಚನೆ ಮಾಡಿದ ಮಂಗಳೂರು ಆಳ್ವ ಎಸೋಸಿಯೇಶನ್‍ನ ಮಾಲಕ ಸುಪ್ರಿತ್ ಆಳ್ವ, ಕನ್‍ಸ್ಟ್ರಕ್ಷನ್  ನಿರ್ವಹಿಸಿದ ರಾಜಶೇಖರ್, ಸೈಟ್ ಸೂಪರ್‍ವೈಸರ್ ತಿಲಕ್ ಗೌಡ ಅವರನ್ನು ಗಣ್ಯರು ಗೌರವಿಸಿದರು. ದಿ ಪುತ್ತೂರು ಕ್ಲಬ್‍ನ ಉಪಾಧ್ಯಕ್ಷ ದೀಪಕ್ ಕೆ.ಪಿ ಅವರು ಗೌರವ ಸಮರ್ಪಣೆ ಕಾರ್ಯಕ್ರಮ ನಿರ್ವಹಿಸಿದರು.

ಕ್ಲಬ್‍ನಲ್ಲಿ ನೂತನವಾಗಿ ಸರ್ವಿಸ್ ಮೆಂಬರ್ ಶಿಫ್ ಕಾರ್ಡ್ ಅನ್ನು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಡಾ. ದೀಪಕ್ ರೈ ಅವರು ಗೌರವ ಸದಸ್ಯತನವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡರಿಗೆ ನೀಡಿದರು.

ದಿ ಪುತ್ತೂರು ಕ್ಲಬ್ ಅಧ್ಯಕ್ಷ ಡಾ. ದೀಪಕ್ ರೈ, ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ, ಕ್ಲಬ್‍ನ ಉಪಾಧ್ಯಕ್ಷ ದೀಪಕ್ ಕೆ.ಪಿ, ಕೋಶಾಧಿಕಾರಿ ದಿವಾಕರ್ ಕೆ.ಪಿ, ಜೊತೆ ಕಾರ್ಯದರ್ಶಿ ಪ್ರಭಾಕರ್ ಎ.ಎಮ್, ರೂಪೇಶ್ ಶೇಟ್,ಹವಾನಿಯಂತ್ರಿತ ಕೊಠಡಿ ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು, ಇಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಪಾಯಿಂಟ್ ಉದ್ಘಾಟಿಸಿದ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ,ಹವಾನಿಯಂತ್ರಿತ ಸಭಾಂಗಣ ಉದ್ಘಾಟಿಸಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ,  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರಿನಿಂದ ವರ್ಗಾವಣೆಗೊಂಡ ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಆಡಳಿತ ನಿರ್ದೇಶಕರಾದ ಬೂಡಿಯಾರ್ ರಾಧಾಕೃಷ್ಣ ರೈ, ಶಿವರಾಮ ಆಳ್ವ, ನಿತಿನ್ ಪಕ್ಕಳ, ಮನೋಜ್ ರೈ, ಚಂದ್ರಶೇಖರ್, ಪ್ರಶಾಂತ್ ಶೆಣೈ, ಜಯಂತ್ ನಡುಬೈಲು ಮತ್ತಿತ್ತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article