-->
CRICKET: ಪ್ರೆಸ್ ಕ್ಲಬ್ ಇಲೆವೆನ್ ಗೆ ಮಂಡಿಯೂರಿದ ಪೊಲೀಸ್ ಇಲೆವೆನ್!!

CRICKET: ಪ್ರೆಸ್ ಕ್ಲಬ್ ಇಲೆವೆನ್ ಗೆ ಮಂಡಿಯೂರಿದ ಪೊಲೀಸ್ ಇಲೆವೆನ್!!

ಪುತ್ತೂರು: ಪುತ್ತೂರಿನ ಫಿಲೋಮಿನಾ ಕಾಲೇಜು ಮೈದಾನದಲ್ಲಿ ನಡೆದ ಅಭಿರಾಮ್ ಫ್ರೆಂಡ್ಸ್ ಕ್ಲಬ್ ಪುತ್ತೂರು ಆಯೋಜಿಸಿದ ಆಫೀಶಿಯಲ್ ಚಾಂಪಿಯನ್ ಶಿಪ್ ಕ್ರಿಕೆಟ್ ಪಂದ್ಯಾಟದಲ್ಲಿ ಪುತ್ತೂರು ಪ್ರೆಸ್ ಕ್ಲಬ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

 ಭಾನುವಾರ ನಡೆದ ಹೊನಲು-ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಪೊಲೀಸ್ ಇಲೆವೆನ್ ತಂಡವನ್ನು 29 ರನ್ ಗಳ ಅಂತರದಲ್ಲಿ ಮಣಿಸಿ ಪ್ರೆಸ್ ಕ್ಲಬ್ ಇಲೆವೆನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. 

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಪೊಲೀಸ್ ಇಲೆವೆನ್ ತಂಡ ಪ್ರೆಸ್ ಕ್ಲಬ್ ಇಲೆವೆನ್ ತಂಡದ ಬ್ಯಾಟರ್ ಗಳನ್ನ ಕಟ್ಟಿಹಾಕಲು ವಿಫಲರಾದರು. ಪೊಲೀಸ್ ಇಲೆವೆನ್ ತಂಡದ ಬೌಲರ್ ಗಳನ್ನ ಬೆಂಡೆತ್ತಿದ ಪ್ರೆಸ್ ಕ್ಲಬ್ ಇಲೆವೆನ್ ತಂಡ ನಿಗದಿತ ಐದು ಓವರ್ ಗಳಲ್ಲಿ 51 ರನ್ ಗಳ ಬೃಹತ್ ಗುರಿಯನ್ನು ನೀಡಿತ್ತು. ಗುರಿ ಬೆನ್ನಟ್ಟಿದ ಪೊಲೀಸ್ ಇಲೆವೆನ್ ತಂಡ ಪ್ರೆಸ್ ಕ್ಲಬ್ ಇಲೆವೆನ್ ತಂಡದ ದಾಳಿಗೆ ನೆಲಕ್ಕಚ್ಚಿತು. ಪೊಲೀಸ್ ಇಲೆವೆನ್ ತಂಡ 5 ಓವರ್ ಗಳಿಗೆ ಕೇವಲ 27 ರನ್ ಗಳಿಸಲಷ್ಟೇ ಶಕ್ತವಾಯಿತು. 


ಪ್ರೆಸ್ ಕ್ಲಬ್ ತಂಡದ ಪರ ಶರಣ್ ಅವರ ಸಮಯೋಚಿತ ದಾಳಿಗೆ ಪೊಲೀಸ್ ತಂಡ ತನ್ನ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸೋಲನುಭವಿಸಿತು. ಪಂದ್ಯಾಟದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಪ್ರೆಸ್ ಕ್ಲಬ್ ತಂಡದ ಶರಣ್ ಮ್ಯಾನ್ ಆಫ್ ದಿ ಸಿರೀಸ್ ಗೆ ಭಾಜನರಾದರು. ಬೆಸ್ಟ್ ಬ್ಯಾಟರ್ ಆಗಿ  ಪೊಲೀಸ್ ಇಲವೆನ್ ತಂಡದ ಶಿವ ಕುಮಾರ್, ಬೆಸ್ಟ್ ಬೌಲರ್ ಆಗಿ ಪೊಲೀಸ್ ಇಲೆವೆನ್ ತಂಡದ ಬಸವರಾಜ್ ಹೊರಹೊಮ್ಮಿದರು. 


ಎಂಟು ತಂಡಗಳ ಅಫೀಶಿಯಲ್ ಚಾಂಪಿಯನ್ ಶಿಪ್ ಕ್ರಿಕೆಟ್ ನಲ್ಲಿ 'ಎ' ಗ್ರೂಪ್ ನ ಪಂದ್ಯಾಟ ಶನಿವಾರ ನಡೆದಿದ್ದು, ಪ್ರೆಸ್ ಕ್ಲಬ್ ತಂಡ ಬಲಿಷ್ಠ ಪಿಇಟಿ ಇಲೆವೆನ್ ತಂಡವನ್ನು ಸೆಮಿಫೈನಲ್ ನಲ್ಲಿ ಮಣಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು. 'ಬಿ' ಗ್ರೂಪ್ ನಲ್ಲಿ ನಡೆದ ಪಂದ್ಯಕೂಟದಲ್ಲಿ ಡಾಕ್ಟರ್ಸ್ ಇಲೆವೆನ್ ತಂಡದಿಂದ ವಾಕ್ ಓವರ್ ಪಡೆದುಕೊಂಡಿದ್ದ ಪೊಲೀಸ್ ತಂಡ, ಫಾರೆಸ್ಟ್ ಇಲೆವೆನ್ ಮತ್ತು ಮೆಸ್ಕಾಂ ಇಲೆವೆನ್ ತಂಡದ ಮಧ್ಯೆ ನಡೆದ ಪಂದ್ಯಾಟದಲ್ಲಿ ಜಯಗಳಿಸಿದ್ದ ಮೆಸ್ಕಾಂ ತಂಡದ ವಿರುದ್ಧ ಸೆಮಿಫೈನಲ್ ನಲ್ಲಿ ಜಯಗಳಿಸಿ ಫೈನಲ್ ಪ್ರವೇಶಿಸಿತ್ತು. ಅಭಿರಾಮ್ ಫ್ರೆಂಡ್ಸ್ ಕ್ಲಬ್ ಅಫೀಶಿಯಲ್ ಚಾಂಪಿಯನ್ಸ್ ಟ್ರೋಪಿ ಜೊತೆಗೆ ನಗದು ಪ್ರಶಸ್ತಿಯನ್ನೂ ಒಳಗೊಂಡಿತ್ತು.

Ads on article

Advertise in articles 1

advertising articles 2

Advertise under the article