
CRIME: ಮಂಗಳೂರಿನ ಉದ್ಯಮಿಗೆ ಭೂಗತ ಪಾತಕಿಯಿಂದ ಜೀವ ಬದೆದರಿಕೆ!!
Sunday, January 26, 2025
ಮಂಗಳೂರು: ಮಂಗಳೂರು ಹೊರವಲಯದ ಬಜ್ಪೆಯ ಉದ್ಯಮಿ ರೊನಾಲ್ಡ್ ಅವರಿಗೆ ಭೂಗತ ಪಾತಕಿ ಕಲಿ ಯೋಗೇಶ್ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರೊನಾಲ್ಡ್ ಎಂಬವರು ಕೆಂಪು ಕಲ್ಲಿನ ಕೋರೆ ಹಾಗೂ ಇತರೆ ಉದ್ಯಮದಲ್ಲಿ ತೊಡಗಿಕೊಂಡಿದ್ದು, ಇವರಲ್ಲಿ ಜ.17ರಂದು ಕಲಿ ಯೋಗೇಶ್ ಕರೆ ಮಾಡಿ 3 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇಲ್ಲದಿದ್ದಲ್ಲಿ ಮನೆಯವರನ್ನೆಲ್ಲ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ನಿನ್ನೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.