
ಕುಕ್ಕೆ: ಚಂಪಾ ಷಷ್ಠಿ ಪ್ರಯುಕ್ತ ಸುಬ್ರಹ್ಮಣ್ಯ ದೇವರ ಸಂಭ್ರಮದ ಬ್ರಹ್ಮರಥೋತ್ಸವ
ಕಡಬ: ಇತಿಹಾಸ
ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ
ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಪ್ರಯುಕ್ತ ಭಾರೀ ವಿಜೃಂಭಣೆಯಿಂದ ಇಂದು
ದೇವರ ಬ್ರಹ್ಮರಥೋತ್ಸವ ಜರುಗಿತು. ಇಂದು ಬೆಳಗ್ಗೆ 6.57ರ ವೃಶ್ಚಿಕ
ಲಗ್ನ ಸುಮುಹೂರ್ತದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಬ್ರಹ್ಮರಥಾರೋಹಣ ನಡೆಯಿತು.
ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಿ ಕಣ್ಮನ ಸೆಳೆಯಿತು.
ಇದರ ಜೊತೆಗೆ
ಸುವರ್ಣ ವೃಷ್ಟಿ, ಚಿಕ್ಕ ರಥೋತ್ಸವ, ಬಳಿಕ ಚಂಪಾಷಷ್ಠಿ ಮಹಾರಥೋತ್ಸವ
ನಡೆಯಲಿದೆ. ಷಷ್ಠಿ ಕಟ್ಟೆಯಲ್ಲಿ ಮತ್ತು ಒಳಾಂಗಣದ ಕಟ್ಟೆಯಲ್ಲಿ ಅವಳಿ ದೇವರಿಗೆ ಪೂಜೆ
ನಡೆಯಲಿದೆ. ನಂತರ ಪ್ರಧಾನ ಅರ್ಚಕರು
ಭಕ್ತರಿಗೆ ಮೂಲಮೃತ್ತಿಕಾ ಪ್ರಸಾದ ವಿತರಿಸಲಿದ್ದಾರೆ. ಬಳಿಕ ಮಹಾರಥೋತ್ಸವ ಸೇವೆ
ನೆರವೇರಿಸಿದ ಭಕ್ತರಿಗೆ ಮಹಾಪ್ರಸಾದ ನೀಡಲಿದ್ದಾರೆ. ಇನ್ನು ಶುಕ್ರವಾರ ರಾತ್ರಿ ಚಂಪಾಷಷ್ಠಿ ಪ್ರಯುಕ್ತ
ಸುಬ್ರಹ್ಮಣ್ಯ ಸ್ವಾಮಿ ದೇವರ ರಥೋತ್ಸವದ ಬಳಿಕ ತಡರಾತ್ರಿ 2 ಗಂಟೆ ವೇಳೆಗೆ ಪಟಾಕಿ ಸಿಡಿಸಿ ಸೇವೆ ಸಲ್ಲಿಸಲಾಯಿತು.
ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಈ ಕ್ಷಣವನ್ನು ಕಣ್ತುಂಬಿಕೊಂಡರು. ಇಂದು ಬೆಳಗ್ಗೆಯೂ ಅಪಾರ
ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.