ದಾವಣಗೆರೆ: ಡ್ರೀಮ್ ಡೀಲ್ 2ನೇ ಆವೃತ್ತಿಗೆ ಸ್ಯಾಂಡಲ್‌ವುಡ್ ನಟಿ ಸುಧಾರಾಣಿ ಚಾಲನೆ
Friday, December 27, 2024
ದಾವಣಗೆರೆ: ಡ್ರೀಮ್ ಡೀಲ್ ಗ್ರೂಪ್ ತನ್ನ ಎರಡನೇ ಆವೃತ್ತಿಯನ್ನು ದಾವಣಗೆರೆಯಲ್ಲಿ ಲೋಕಾರ್ಪಣೆ ಮಾಡಿದೆ. ಇಲ್ಲಿನ ದಾವಣಗೆರೆಯ ಹೊಟೇಲ್ ಪೂಜಾ ಇಂಟರ್‌ನ್ಯಾಷನಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಡ್ರೀಮ್ ಡೀಲ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಸುಹೈಲ್, ಖ್ಯಾತ ಚಿತ್ರ ನಟಿ ಸುಧಾರಾಣಿ, ಕಾಮಿಡಿ ಕಿಲಾಡಿಗಳು ಸೀಸನ್ 4ರ ಮೊದಲ ರನ್ನರ್ ಅಪ್ ಗಿಲ್ಲಿ ನಟ, ಖ್ಯಾತ ನಿರೂಪಕಿ ಅನುಪಮ ಭಟ್ ಇತರ ಗಣ್ಯರು ಸೇರಿ ಉದ್ಘಾಟಿಸಿದರು.
ಈ ವೇಳೆ ನಟಿ ಸುಧಾರಾಣಿ ಮಾತನಾಡಿ, ಡ್ರೀಮ್ ಡೀಲ್ ಗ್ರೂಪ್ ಮಂಗಳೂರಿನಲ್ಲಿ ಪ್ರಾರಂಭಗೊಂಡು ಇದೀಗ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ದೇಶಾದ್ಯಂತ ತಮ್ಮ ಸಂಸ್ಥೆಯನ್ನು ವಿಸ್ತರಿಸುತ್ತ ಯುವ ಪೀಳಿಗೆಗೆ ಉದ್ಯಮ ಮತ್ತು ಉದ್ಯೋಗ ನೀಡುವ ಮೂಲಕ ಜನಮಾನಸದಲ್ಲಿ ಉಳಿದಿದೆ. ಇದೀಗ ದಾವಣಗೆರೆಯಲ್ಲೂ ಸಂಸ್ಥೆಯ ಎರಡನೇ ಆವೃತ್ತಿ ಆರಂಭವಾಗಿದ್ದು ಜನರ ಅಗತ್ಯತೆ ಮತ್ತು ಕನಸನ್ನು ನನಸಾಗಿಸಲಿದೆ. ಯುವಕರು ಸೇರಿ ಸ್ಥಾಪಿಸಿದ ಸಂಸ್ಥೆಗಳಿಗೆ ನಾವು ಪ್ರೋತ್ಸಾಹಿಸಿ ಅವರನ್ನು ಬೆಳೆಸಬೇಕು ಎಂದವರು ಹೇಳಿದರು.
ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮಹಮ್ಮದ್ ಸುಹೈಲ್ ಮಾತನಾಡಿ, ಡ್ರೀಮ್ ಡೀಲ್ ಸಂಸ್ಥೆಯು ನಮ್ಮ ಗ್ರಾಹಕರ ಸಂಸ್ಥೆಯಾಗಿದೆ. ಈಗಾಗಲೇ ರಾಜ್ಯದ 16 ಕಡೆ ಕಚೇರಿಯನ್ನು ತೆರೆದಿದ್ದು ಇನ್ನೂ ಕೆಲವು ಸಂಸ್ಥೆಗಳ ಕಾಮಗಾರಿ ಹಂತದಲ್ಲಿ ಇದೆ. ಮುಂದಿನ ವರ್ಷದಲ್ಲಿ ದೇಶಾದ್ಯಂತ ಸಂಸ್ಥೆಯು ಕಚೇರಿಯನ್ನು ತೆರೆಯುವ ಮೂಲಕ ದೇಶದಲ್ಲಿ 4 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ ಎಂದವರು ಹೇಳಿದರು.