.jpg)
PUTTUR: ದಲಿತ ಸಂಘಟನೆ ಹೋರಾಟಕ್ಕೆ ಬೆದರಿದ ಪೊಲೀಸರು!!
ಪುತ್ತೂರು: ಶಿವಪ್ಪ ಕೆರೆಮೂಲೆ ಅವರ ಮೃತದೇಹವನ್ನ ಅಮಾನವೀಯವಾಗಿ ರಸ್ತೆ ಬದಿ ಮಲಗಿಸಿ ಹೋದ ತಾವ್ರೋ ಫರ್ನಿಚರ್ ಮಾಲೀಕ ಹೆನ್ರಿ ತಾವ್ರೋ ಬಂಧಿಸಿಸುವಂತೆ ಆಗ್ರಹಿಸಿ ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಬಳಿ ದಲಿತ ಸಂಘಟನೆ ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ ಪುತ್ತೂರು ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ದಲಿತ ಸಂಘಟನೆ ತಿಳಿಸಿತ್ತು. ಆದರೆ ಡಿವೈಎಸ್ಪಿ ಅರುಣ್ ನಾಗೇಗೌಡ ಅವರು ಸಂಘಟನೆಯ ಪ್ರಮುಖರಲ್ಲಿ ಮಹಾಲಿಂಗೇಶ್ವರ ದೇವರು ಹಾಗೂ ಮಕ್ಕಳ ಮೇಲೆ ಆಣೆಪ್ರಮಾಣ ಹಾಕಿ ಆರೋಪಿ ಹೆನ್ರಿ ತಾವ್ರೋನನ್ನ ಬಂಧಿಸುವುದಾಗಿ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಪ್ರತಿಭಟನೆಯಲ್ಲಿದ್ದ ಆದಿದ್ರಾವಿಡ ಸಮಿತಿ ಪುತ್ತೂರು ಘಟಕದ ಅಧ್ಯಕ್ಷ ಬಾಬು ಮರಿಕೆ ತಿಳಿಸಿದ್ರು. ಅದರಂತೆ ಪೊಲೀಸ್ ಠಾಣೆ ಮುಂಭಾಗ ಮಾಡಬೇಕಿದ್ದ ಪ್ರತಿಭಟನೆಯನ್ನ ಹಿಂಪಡೆದು ಅಮರ್ ಜವಾನ್ ಜ್ಯೋತಿ ಬಳಿ ಮಾಡಿದ್ದಾರೆ ಎಂಬುದಾಗಿ ಮಾಹಿತಿ ತಿಳಿದುಬಂದಿದೆ.
ಪ್ರತಿಭಟನೆಯಲ್ಲಿ ನೂರಾರು ದಲಿತ ಸಂಘಟನೆಯ ಕಾರ್ಯಕರ್ತರು ಭಾಗವಹಸಿದ್ದರು. ಇನ್ನು ಪ್ರತಿಭಟನೆಯ ಕಾವು ಹೆಚ್ಚಾಗಬಹುದು ಎಂಬ ಉದ್ದೇಶದಿಂದ ಪುತ್ತೂರು ನಗರ ಪೊಲೀಸ್ ಠಾಣೆಯ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.