.jpg)
PUTTUR: ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಸುಬ್ರಹ್ಮಣ್ಯಕ್ಕೆ ಭೇಟಿ!!
Tuesday, November 19, 2024
ಪುತ್ತೂರು: ಟೀಂ ಇಂಡಿಯಾ ಟಿ-20 ಕ್ರಿಕೆಟ್ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಇಂದು ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ರು.
ದಂಪತಿ ಸಮೇತ ಶ್ರೀಕ್ಷೇತ್ರಕ್ಕೆ ಆಗಮಿಸಿದ ಅವರು ಆಶ್ಲೇಷ ಬಲಿ ಪೂಜೆ, ಮಹಾಪೂಜೆ ಅಭಿಷೇಕ ನೆರವೇರಿಸಿದ್ರು. ಇತ್ತೀಚೆಗೆ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 3-1 ಅಂತರದಿಂದ ಟಿ-20 ಸರಣಿಯನ್ನ ವಶಪಡಿಸಿಕೊಂಡಿತ್ತು. ಈ ಮೂಲಕ ಸೂರ್ಯ ಕುಮಾರ್ ಯಾದವ್ ಟಿ-20 ನಾಯಕತ್ವದಲ್ಲಿ ಒಂದರ ಮೇಲೊಂದು ಸರಣಿ ಜಯಿಸುವ ಮೂಲಕ ಅಂತರಾಷ್ಟ್ರೀಯ ಟಿ-20ಯಲ್ಲಿ ಹೊಸ ಮೈಲಿಗಲ್ಲು ಆರಂಭಿಸಿದ್ದಾರೆ.