-->
PUTTUR: ಪುತ್ತೂರು ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆಗೆ ಸಿದ್ಧತೆ!?

PUTTUR: ಪುತ್ತೂರು ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆಗೆ ಸಿದ್ಧತೆ!?


ಪುತ್ತೂರು: ಮೃತಪಟ್ಟ ಕೂಲಿ ಕಾರ್ಮಿಕರನ್ನು ರಸ್ತೆ ಬದಿ ಮಲಗಿಸಿ ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಲ್ಮರದ ಕೆರೆಮೂಲೆ ಎಂಬಲ್ಲಿ ನಡೆದಿದ್ದು, ಶವವನ್ನು ಅವಮಾನಕಾರಿ ರೀತಿಯಲ್ಲಿ ಬಿಟ್ಟು ಹೋದ ಮಾಲಕನ ವಿರುದ್ಧ ಇದೀಗ ಭಾರೀ ಆಕ್ರೋಶ ಕೇಳಿ ಬಂದಿದೆ.


ಪುತ್ತೂರಿನ ಸಾಲ್ಮರದ ಕೆರೆಮೂಲೆಯಲ್ಲಿರುವ ತಾವ್ರೋ ಫರ್ನಿಚರ್ ಆಂಡ್ ವುಡ್ ಇಂಡಸ್ಟ್ರೀಸ್ ನಲ್ಲಿ ಫರ್ನಿಚರ್ ಕೆಲಸದ ಸಹಾಯಕರಾಗಿ ಹೋದ ಕೂಲಿ ಕಾರ್ಮಿಕ ಶಿವಪ್ಪ ಎಂಬವರ ಮೃತ ದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ರಸ್ತೆ ಸಮೀಪ ಮಲಗಿಸಿ ಹೋಗಿದ್ದಾರೆ. ನವೆಂಬರ್ 16 ರಂದು ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಕಾಮಗಾರಿಯ ಮಾಲಕ ಹೆನ್ರಿ ವಿರುದ್ಧ ಮನೆ ಮಂದಿ ಮತ್ತು ಊರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಸಾಲ್ಮರ ತಾವ್ರೋ ಫರ್ನಿಚರ್ ಆಂಡ್ ವುಡ್ ಇಂಡಸ್ಟ್ರೀಸ್ ನಲ್ಲಿ ಫರ್ನಿಚರ್ ನ ಕೆಲಸಕ್ಕೆಂದು ಶಿವಪ್ಪ ಅವರನ್ನು ಸಂಸ್ಥೆಯ ಮಾಲಕ ಹೆನ್ರಿ ಕರೆಸಿಕೊಂಡಿದ್ದರು. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶಿವಪ್ಪ ಅವರು ಸಾವನ್ನಪ್ಪಿದ್ದು, ಅವರ ಮೃತದೇಹವನ್ನು ಮಾಲಕ ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಮನೆಯ ಪಕ್ಕದಲ್ಲೇ ಇರಿಸಿ ಹೊರಟಿದ್ದಾರೆ. ಇದನ್ನು ಮನೆಯಲ್ಲಿದ್ದ ಶಿವಪ್ಪ ಅವರ ಪತ್ನಿ ಮತ್ತು ಮಗಳು ಗಮನಿಸಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮನೆಗೆ ಕರೆತಂದಿದ್ದಾರೆ. ತಮ್ಮಲ್ಲೇ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದರೂ, ಈ ವಿಚಾರವನ್ನು ಮನೆಯವರ ಗಮನಕ್ಕೂ ತರದೆ, ಆಸ್ಪತ್ರೆಗೂ ಕೊಂಡೊಯ್ಯದೆ ಪಿಕಪ್ ವಾಹನದಲ್ಲಿ ಅವಮಾನಕಾರಿ ರೀತಿಯಲ್ಲಿ ಸಾಗಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. 


ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣರಾದ ಮಾಲಕ ಹೆನ್ರಿಯನ್ನು ಕೂಡಲೇ ಬಂಧಿಸುವಂತೆ ದಲಿತ ಸಂಘಟನೆಗಳು ಒತ್ತಾಯಿಸಿವೆ. ಇಂದು ಸಂಜೆ (ನ.18) ಒಳಗೆ ಹೆನ್ರಿಯನ್ನ ಬಂಧಿಸಿದಿದ್ದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article