-->
Bengaluru Rains | ರಾಜಧಾನಿಯಲ್ಲಿ ನಿಲ್ಲದ ಮಳೆ; ವಾಹನ ಸವಾರರ ಪರದಾಟ!

Bengaluru Rains | ರಾಜಧಾನಿಯಲ್ಲಿ ನಿಲ್ಲದ ಮಳೆ; ವಾಹನ ಸವಾರರ ಪರದಾಟ!

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಚೆನ್ನೈ ಹಾಗೂ ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಕಳೆದ ರಾತ್ರಿಯಿಂದ ಶುರುವಾದ ಜಿಟಿಜಿಟಿ ಮಳೆ ಮುಂದುವರೆದಿದೆ. ಈಗಾಗಲೇ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಐಟಿ, ಬಿಟಿ ಕಂಪೆನಿಗಳ ನೌಕರರಿಗೆ ವರ್ಕ್ ಫ್ರಂ ಹೋಮ್ ನೀಡುವಂತೆ ಕೆ-ಟೆಕ್ ಮನವಿ ಮಾಡಿದೆ. 

ಈ ನಡುವೆ ಇಂದು ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಿದ್ದ ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಹೀಗಾಗಿ ಟಾಸ್ ಕೂಡಾ ಮಾಡಲು ಸಾಧ್ಯವಾಗಿಲ್ಲ.‌ ಬಹುತೇಕ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಮೊದಲ ದಿನದ ಪಂದ್ಯಾಟ ಮಳೆಗೆ ಆಹುತಿಯಾಗುವ ಸಾಧ್ಯತೆ ಹೆಚ್ಚಿದೆ.

Ads on article

Advertise in articles 1

advertising articles 2

Advertise under the article