.jpeg)
ಕಡಬದ ಬಲ್ಯ ಶಾಲೆಯ ಕೊಠಡಿಯೊಳಗೆ ನೀರೋ ನೀರು
Sunday, July 14, 2024
ಕಡಬ: ಸುಂಟರಗಾಳಿಯ ಅಬ್ಬರಕ್ಕೆ ಶಾಲೆಯ ಹಂಚುಗಳು ಹಾರಿ ಹೋದ ಘಟನೆ ಕಡಬದ ಬಲ್ಯ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದಿದೆ.
ಶಾಲೆಯ ಎಲ್ಲಾ ಕೊಠಡಿಯ ಹಲವಾರು ಹಂಚುಗಳು ಗಾಳಿಯ ರಭಸಕ್ಕೆ ಹಾರಿ ನೆಳಕ್ಕುರಿಳಿ ಚೆಲ್ಲಾಪಿಲ್ಲಿಯಾಗಿವೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಧಾವಿಸಿ ದುರಸ್ಥಿಪಡಿಸಬೇಕಿದೆ.
ಯಾಕಂದ್ರೆ ನಾಳೆ ದಿನ ಶಾಲೆ ಇರುವುದರಿಂದ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗಲಿದೆ. ಕ್ಲಾಸ್ ಮಾಡಲು ಶಿಕ್ಷಕರಿಗೂ ಬಹಳ ಕಷ್ಟವಾದ ಪರಿಸ್ಥಿತಿ ಇದೆ. ಇಡೀ ಕೊಠಡಿಗಳಲ್ಲಿ ಮಳೆ ನೀರು ಸೋರುತ್ತಿದೆ. ಅಷ್ಟೇ ಅಲ್ಲದೇ ಇಂದು ಭಾನುವಾರ ಆಗಿದ್ದ ಕಾರಣ ಅನಾಹುತ ತಪ್ಪಿದೆ.