ಬಜರಂಗದಳದ ಹುಡುಗರೂ ತಪ್ಪು ಮಾಡಿದಾಗ್ಲೂ ಖಂಡಿಸಿದ್ದೆ!!
ಬೆಂಗಳೂರು: ಸೌಜನ್ಯ ವಿಚಾರದಲ್ಲಿ ಧರ್ಮ ಸಂರಕ್ಷಣೆ ಎಂದು ಬಂದವರೆಲ್ಲರೂ ನೆಲ ಕಚ್ಚಿದ್ದಾರೆ ಎಂದು ಸೌಜನ್ಯ ನ್ಯಾಯ ಪರ ಹೋರಾಟಗಾರ್ತಿ ಪ್ರಸನ್ನ ರವಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಸಂತ್ ಗಿಳಿಯಾರ್ ಅನ್ನೋ ಪತ್ರಕರ್ತನ ಸತ್ಯಶೋಧನೆಯ ಅಂತಿಮ ವರದಿ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ನಾನು 2012ರಲ್ಲಿಯೇ ಬಿಜೆಪಿ ಪಕ್ಷ ಬಿಟ್ಟು ಹೊರಬಂದಿದ್ದು, ಯಾರೊಬ್ಬರ ರಬ್ಬರ್ ಸ್ಟ್ಯಾಂಪ್ ಆಗದೇ ಕೆಲಸ ಮಾಡುತ್ತಿದ್ದೇನೆ. ಪ್ರಸನ್ನ ರವಿಗೆ ಸತ್ಯ ಹೇಳಲು ಯಾವತ್ತೂ ಹೆದರಿಕೆ ಇಲ್ಲ ಎಂದು ಗುಡುಗಿದ್ದಾರೆ.
ಗುರುಪುರ ಸ್ವಾಮೀಜಿ ನನ್ನ ಗುರುಗಳು!
ಗುರುಪುರದ ವಜ್ರದೇಹಿ ಮಠದ ಸ್ವಾಮಿಗಳು ನನ್ನ ಆತ್ಮೀಯರು, ಗುರುಗಳೂ ಆಗಿದ್ದವರು. ಆದರೆ, ಸೌಜನ್ಯ ವಿಚಾರದಲ್ಲಿ ಅವರು ತಪ್ಪು ಮಾಡಿದ್ದಾರೆ. ಹಾಗಾಗಿ ವಿರೋಧಿಸಿದ್ದೇನೆ. ನಾನು ಸಂಘಟನೆಯಲ್ಲಿ ಇದ್ದಾಗಲೂ ಅಷ್ಟೇ, ಬಜರಂಗದಳದ ಹುಡುಗರು ತಪ್ಪು ಮಾಡಿದ್ರೂ ಅದು ತಪ್ಪೇ ಎನ್ನುತ್ತಿದ್ದೆ. ತಪ್ಪು ಮಾಡಿದವನು ಹಿಂದೂ ಆದರೂ ಅದು ತಪ್ಪೇ. ಸೌಜನ್ಯ ನ್ಯಾಯಪರ ಹೋರಾಟ ವಿಚಾರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.