Blood Donation: ಫಾಝಿಲ್ ಹತ್ಯೆಗೆ 2 ವರ್ಷ; ರಕ್ತದಾನ ಶಿಬಿರ ಆಯೋಜನೆ
Sunday, July 28, 2024
ಮಂಗಳೂರು: ನಗರದ ಹೊರವಲಯದ ಸುರತ್ಕಲ್ ನ ಮಂಗಳಪೇಟೆ ನಿವಾಸಿ ಫಾಝಿಲ್ ಕೊಲೆಯಾಗಿ ಇಂದಿಗೆ 2 ವರ್ಷ ಸಂದಿವೆ. ಈ ಹಿನ್ನೆಲೆ ಫಾಝಿಲ್ ಮೆಮೊರಿಯಲ್ ಟ್ರಸ್ಟ್ ಹಾಗೂ ಬ್ಲಡ್ ಹೆಲ್ಪೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ ರಕ್ತನಿಧಿ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ರಕ್ತದಾನ ಶಿಬಿರ ಮಂಗಳಪೇಟೆಯ ಎಂಜೆಎಂ ಮದ್ರಸ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಇಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಮೃತಪಟ್ಟ ಫಾಝಿಲ್ ಕೂಡಾ ಬ್ಲಡ್ ಹೆಲ್ಪೈನ್ ಸದಸ್ಯರಾಗಿದ್ದರು. ಹಲವು ಬಾರಿ ರಕ್ತದಾನ ನಡೆಸಿದ್ದರು.
2 ವರ್ಷಗಳ ಹಿಂದೆ ಸುರತ್ಕಲ್ ನಗರದಲ್ಲಿ ದುಷ್ಕರ್ಮಿಗಳಿಂದ ಫಾಝಿಲ್ ಕೊಲೆಯಾಗಿತ್ತು.