ಪುತ್ತಿಲ ಪರಿವಾರದ ವಿರುದ್ಧ ಶಾಂತಿಭಂಗ ಪ್ರಕರಣ
Thursday, July 27, 2023
ಪುತ್ತೂರು: ಅನುಮತಿಯಿಲ್ಲದೆ ವಿಜಯೋತ್ಸವ ಆಚರಿಸಿದ ಹಿನ್ನೆಲೆಯಲ್ಲಿ ಪುತ್ತಿಲ ಪರಿವಾರದ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ಯಾಪು ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ ಗೆಲುವು ಸಾಧಿಸಿದ ಬಳಿಕ ನಡೆದ ವಿಜಯೋತ್ಸವ ಪುತ್ತೂರಿನ ಮುಖ್ಯ ರಸ್ತೆಯುದ್ದಕ್ಕೂ ಸಾಗಿಬಂತು. ಆದ್ರೆ ಪುತ್ತಿಲ ಪರಿವಾರ ಈ ವಿಜಯೋತ್ಸವ ಆಚರಣೆಗೆ ಯಾವುದೇ ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿಭಂಗ ಪ್ರಕರಣವನ್ನ ಪುತ್ತೂರು ನಗರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಇನ್ನು ಪುತ್ತೂರಿನ ಮಿನಿ ವಿಧಾನಸೌಧದಿಂದ ಮುಕ್ರಂಪಾಡಿಯ ವರೆಗೆ ಡಿಜೆ ಮೆರವಣಿಗೆ ಮೂಲಕ ಪುತ್ತಿಲ ಪರಿವಾರ ವಿಜಯೋತ್ಸವ ಆಚರಿಸಿದ್ದಾರೆ.
.jpeg)
