ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ನಾಮಕರಣಕ್ಕೆ ವಿರೋಧ...!!!
Wednesday, July 19, 2023
ಮಂಗಳೂರು: ಸುರತ್ಕಲ್ ವೃತ್ತಕ್ಕೆ ವಿನಾಯಕ ದಾಮೋದರ್ ಸಾವರ್ಕರ್ ನಾಮಕರಣಕ್ಕೆ ವಿರೋಧ ವ್ಯಕ್ತಪಡಿಸಿ SDPI ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿಯು ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನು ಭೇಟಿಯಾಗಿ ಮನವಿಯನ್ನು ನೀಡಿದ್ರು.
ಸ್ಥಳೀಯ ನಾಗರಿಕರ ಬೇಡಿಕೆಯ ಮೇರೆಗೆ ಇಲ್ಲಿ ಸೂಚಿಸಿರುವ ಹೆಸರಿನಲ್ಲಿ (ಕೋಟಿ ಚೆನ್ನಯ್ಯ, ಯು. ಶ್ರೀನಿವಾಸ ಮಲ್ಯ ಹಾಗೂ ಎಂ.ಲೋಕಯ್ಯ) ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ನಿಯೋಗದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಯಾಸೀನ್ ಅರ್ಕುಳ, ಕಾರ್ಯದರ್ಶಿ ಅಝರ್ ಉಳಾಯಿಬೆಟ್ಟು, ಕ್ಷೇತ್ರ ಸಮಿತಿ ಸದಸ್ಯರಾದ ಉಸ್ಮಾನ್ ಗುರುಪುರ ಹಾಗೂ ನಾಸಿರ್ ಉಳಾಯಿಬೆಟ್ಟು ಉಪಸ್ಥಿತರಿದ್ದರು.
