ಮೃತ ಕಾರ್ಮಿಕನ ಅಂತ್ಯ ಸಂಸ್ಕಾರ ನೆರವೇರಿಸಿದ ಸಾರ್ವಜನಿಕರು
Monday, July 17, 2023
ಮಂಗಳೂರು: ಕಾರ್ಮಿಕನೋರ್ವನನ್ನ ಪೆಟ್ರೋಲ್ ಹಾಕಿ ಬೆಂಕಿ ಕೊಟ್ಟು ಕೊಂದ ಪ್ರಕರಣದಲ್ಲಿ ಕಾರ್ಮಿಕನ ಕುಟುಂಬಸ್ಥರು ಯಾರೆಂದು ಪತ್ತೆಯಾಗದಿರುವ ಕಾರಣ ಇಂದು ಸಾರ್ವಜನಿಕರ ಸಮ್ಮುಖದಲ್ಲಿ ಕಾರ್ಮಿಕ ಗಜ್ನಾನ್ @ ಜಗುನ ಅಂತ್ಯಸಂಸ್ಕಾರ ನಂದಿಗುಡ್ಡದಲ್ಲಿ ನೆರವೇರಿಸಲಾಯಿತು.
ಊತ್ತರ ಭಾರತ ಮೂಲದ ಗಜ್ನಾನ್ ಎಂಬಾತ ತೌಸಿಫ್ ಹುಸೈನ್ ನ ಜನರಲ್ ಸ್ಟೋರ್ ನಲ್ಲಿ ಕೆಲಸಕ್ಕಿದ್ದ. ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕ ಗಜ್ನಾನ್ ನನ್ನ ಪಾಪಿ ತೌಸಿಫ್ ಹುಸೈನ್ ಪೆಟ್ರೋಲ್ ಹಾಕಿ ಸುಟ್ಟು ಕೊಂದಿದ್ದ, ಇದಕ್ಕೆ ಪ್ರಮುಖ ಸಾಕ್ಷಿಯಾಗಿ ಜನರಲ್ ಸ್ಟೋರ್ ಪಕ್ಕದಲ್ಲಿರುವ ಅಝರ್ ಇದ್ದರು. ಹಾಗಾಗಿ ಪ್ರಕರಣದ ಆರೋಪಿಯನ್ನ ಪಾಂಡೇಶ್ವರ ಪೊಲೀಸರಿಗೆ ಬಂಧಿಸುವಲ್ಲಿಯೂ ಸಾಧ್ಯವಾಯಿತು.
ಇನ್ನು ಕಾರ್ಮಿಕ ಗಜ್ನಾನ್ ನ ಕುಟುಂಬಸ್ಥರು ಯಾರೆಂದು ಪತ್ತೆಯಾಗದಿರುವ ಕಾರಣ ಪ್ರಮುಖ ಸಾಕ್ಷಿಯಾಗಿದ್ದ ಅಝರ್ ನೇತೃತ್ವದಲ್ಲೇ ಅಂತ್ಯಸಂಸ್ಕಾರ ಕರ‍್ಯವೂ ನೆರವೇರಿತು. ಅಂತ್ಯಸಂಸ್ಕಾರದ ವೇಳೆ ಸಾರ್ವಜನಿಕರು, ಪಾಂಡೇಶ್ವರ ಪೊಲೀಸರು ಇದ್ದರು.
