-->
ಪುತ್ತೂರಿನಲ್ಲಿ ಹಾಡ ಹಗಲೇ ಚಿನ್ನಾಭರಣ-ನಗದು ಲೂಟಿ

ಪುತ್ತೂರಿನಲ್ಲಿ ಹಾಡ ಹಗಲೇ ಚಿನ್ನಾಭರಣ-ನಗದು ಲೂಟಿ



ಪುತ್ತೂರು: ಹಾಡು ಹಗಲೇ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಹಣ ಕಳವು ಮಾಡಿದ ಘಟನೆ ಪುತ್ತೂರು ನಗರದ ಹೊರವಲಯದ ಬನ್ನೂರಿನಲ್ಲಿ ನಡೆದಿದೆ.

ಬನ್ನೂರು ಗ್ರಾಮದ ಕುಂಟ್ಯಾನ ಸದಾಶಿವ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮೌನೀಶ್ ಅವರ ಮನೆಯಿಂದ ಕಳ್ಳತನ ನಡೆದಿದೆ. ಸೋಮವಾರ ಬೆಳಿಗ್ಗೆ ಮನೆಮಂದಿ ಮನೆಗೆ ಬೀಗ ಹಾಕಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು.ಮಧ್ಯಾಹ್ನ 12 ಗಂಟೆಯ ವೇಳೆಗೆ ಹಿಂತಿರುಗಿ ಬಂದಾಗ ಮನೆಯ ಹಿಂಬಾಗಿಲಿನ ಬೀಗ ಮುರಿದು ಕಳ್ಳರು ಒಳಹೊಕ್ಕು ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ.



ಮನೆಯ ಹಿಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಚಿನ್ನದ ಸರ, ಚಿನ್ನದ ಕರಿಮಣಿ ಸರ, ಚಿನ್ನದ ಬ್ರಾಸ್ಲೆಟ್, ಚಿನ್ನದ 13 ಉಂಗುರ, ಚಿನ್ನದ 2 ಕೈಬಳೆ ಸಹಿತ ರೂ.6.90 ಲಕ್ಷ ಬೆಲೆ ಬಾಳುವ 152 ಗ್ರಾಂ ಚಿನ್ನಾಭರಣ ರೂ.50 ಸಾವಿರ ನಗದು ಹಣವನ್ನು ಕಳವು ಮಾಡಿರುವುದಾಗಿ ತಿಳಿದು ಬಂದಿದೆ.



ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್, ಪುತ್ತೂರು ನಗರ ಠಾಣೆಯ ಇನ್ಸ್ಪೆಕ್ಟರ್ ಸುನಿಲ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಸಿಬ್ಬಂದಿಗಳಾದ ಸ್ಕರಿಯ, ವಸಂತ ಗೌಡ, ಸುಬ್ರಮಣ್ಯ ಹಾಗೂ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.

Ads on article

Advertise in articles 1

advertising articles 2

Advertise under the article