ಮಂಗಳೂರು: ಯುವಕನಿಗೆ ಲೈಂಗಿಕ ಕಿರುಕುಳ; ಸುಲ್ತಾನ್ ಗೋಲ್ಡ್ ಸೇಲ್ಸ್ ಮ್ಯಾನೇಜರ್ ಅರೆಸ್ಟ್!
Wednesday, March 8, 2023
ಮಂಗಳೂರು: ಯುವಕನೋರ್ವನಿಗೆ
ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ಒಡ್ಡಿದ ಪ್ರಕರಣದಡಿ ನಗರದ ಸುಲ್ತಾನ್ ಗೋಲ್ಡ್ ಆ್ಯಂಡ್ ಜ್ಯುವೆಲ್ಲರಿಯ
ಸೇಲ್ಸ್ ಮ್ಯಾನೇಜರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಕಾಸರಗೋಡು
ಮೂಲದ ಟಿವಿಎಸ್ ರೋಡ್ ನ ಮೊಹಮ್ಮದ್ ಕುಂಜ್ಞಿ (52) ಬಂಧಿತ. ಈತ ಸಂತ್ರಸ್ತ ಯುವಕನ ಇಚ್ಛೆಗೆ ವಿರುದ್ಧವಾಗಿ
ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೇ, ಜೀವ ಬೆದರಿಕೆ ಒಡ್ಡಿ ದೌರ್ಜನ್ಯ ನಡೆಸಿದ್ದಾಗಿ
ಕದ್ರಿ ಠಾಣೆಗೆ ಸಂತ್ರಸ್ತ ದೂರು ನೀಡಿದ್ದಾನೆ.
ಈ ಕುರಿತು ತನಿಖೆ
ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಕಾಸರಗೋಡಿನಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಿ
ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅಲ್ಲದೇ, ಬಂಧಿತ
ಆರೋಪಿ ಮೊಹಮ್ಮದ್ ಕುಂಜ್ಞಿ ಸುಲ್ತಾನ್ ಗೋಲ್ಡ್ ಆ್ಯಂಡ್ ಜ್ಯುವೆಲ್ಲರಿಯ ಮಾಲಕನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಪಿಯ ವಿರುದ್ಧ
ಐಪಿಸಿ 377 ಹಾಗೂ 506 ಸೆಕ್ಷನ್ ನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.