
ಮಂಗಳಮುಖಿಯರ ಜಾಲಕ್ಕೆ ಸಿಲುಕಿ ಲಿಂಗ ಬದಲಾವಣೆ; ಮಂಗಳೂರು ಹುಡುಗರೇ ಟಾರ್ಗೆಟ್!
ಮಂಗಳೂರು:
ಜಾಲತಾಣದಲ್ಲಿ ಬಂಟ್ವಾಳದ ಮುಸ್ಲಿಂ ಯುವಕನೊಬ್ಬ ಮಂಗಳಮುಖಿಯಾಗಿ ಲಿಂಗ ಬದಲಾಯಿಸಿಕೊಂಡ ಘಟನೆ ವೈರಲ್
ಆಗುತ್ತಿದ್ದಂತೆ ಒಂದೊಂದೇ ಬೆಚ್ಚಿ ಬೀಳಿಸುವ ಹೇಳಿಕೆಗಳು ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಹಾಲಿ ತುಮಕೂರಿನಲ್ಲಿ
ನೆಲೆಸಿರುವ ಬಂಟ್ವಾಳದ ಮುಸ್ಲಿಂ ಹುಡುಗನೊಬ್ಬ ಮಂಗಳಮುಖಿಯರ ಜಾಲಕ್ಕೆ ಸಿಲುಕಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದು,
ಆತನ ಜೊತೆ ಆ ಹುಡುಗನ ಸಂಬಂಧಿಕರು ಸುಮಾರು ಹದಿನೈದು ನಿಮಿಷಗಳ ಕಾಲ ಮಾತುಕತೆ ನಡೆಸಿರುವ ಆಡಿಯೋ ಸಂದೇಶ
ವೈರಲ್ ಆಗಿದೆ. ಇದೇ ಬೆನ್ನಿಗೆ ಹಲವು ಯುವಕರು ಈ ರೀತಿಯ ಜಾಲಕ್ಕೆ ಬಲಿಯಾಗಿರುವ ಸಾಧ್ಯತೆ ಬಗ್ಗೆ ಚರ್ಚೆಯಾಗುತ್ತಿದೆ.
ಮಾತ್ರವಲ್ಲದೇ ಇದರ ಬೆನ್ನತ್ತಿರುವ ಯುವ ಪಡೆಯೊಂದು ಇದರ ಹಿಂದಿರುವ ಶಕ್ತಿಗಳನ್ನು ಹಾಗೂ ಅವರಿಗಿರುವ
ಲಾಭ ಏನು ಅನ್ನೋದರ ಪತ್ತೆಗೆ ಮುಂದಾಗಿದೆ.
ಮೂಲವೊಂದರ
ಪ್ರಕಾರ ದೇರಳಕಟ್ಟೆಯ ಯುವಕನೊಬ್ಬ ಬೆಂಗಳೂರಿಗೆ ಆಗಮಿಸುವ ಮುಸ್ಲಿಂ ಯುವಕರನ್ನು ಮಂಗಳಮುಖಿಯರಲ್ಲಿ
ಕರೆದೊಯ್ದು ಲಿಂಗ ಪರಿವರ್ತನೆಗೆ ಪ್ರೇರೇಪಿಸುತ್ತಿರುವುದಾಗಿ ತಿಳಿದು ಬಂದಿದೆ. ಆ ವ್ಯಕ್ತಿಯ ಪತ್ತೆಗಾಗಿ
ಕೆಲವರು ಮುಂದಾಗಿದ್ದಾಗಿ ತಿಳಿದು ಬಂದಿದೆ. ಈತನ ಜಾಲಕ್ಕೆ ಸಿಲುಕಿ ವಿವಾಹಿತರಾಗಿ ಮಕ್ಕಳು ಹೊಂದಿದ್ದವರು
ಕೂಡಾ ವಿಚ್ಛೇದನ ನೀಡಿ ಲಿಂಗ ಪರಿವರ್ತಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಬಂಟ್ವಾಳ, ದೇರಳ ಕಟ್ಟೆ,
ಮಂಗಳೂರು ಭಾಗದ ನಾಪತ್ತೆಯಾಗಿರುವ ಹಲವು ಯುವಕರು ಲಿಂಗ ಪರಿವರ್ತನೆ ಮಾಡಿಕೊಂಡು ಹೆಣ್ಣಾಗಿ ಬದಲಾಗಿದ್ದಾಗಿ
ಹೇಳಲಾಗುತ್ತಿದೆ. ಇದರ ವಿರುದ್ಧ ಮುಸ್ಲಿಂ ಧಾರ್ಮಿಕ ಗುರುಗಳು ಜಾಗೃತಿ ಮೂಡಿಸುವಂತೆಯೂ ಸಂದೇಶಗಳು
ರವಾನೆಯಾಗುತ್ತಿದೆ.