
ಸುರತ್ಕಲ್: ಮದುವೆಯಾಗಿ ವರ್ಷವಾಗುವ ಮುನ್ನವೇ ಮಹಿಳೆ ನೇಣಿಗೆ ಶರಣು
Monday, January 23, 2023
ಮಂಗಳೂರು: ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ವಿವಾಹಿತ ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಸುರತ್ಕಲ್ ಠಾಣಾ ವ್ಯಾಪ್ತಿಯ ಬಾಳದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ದಿವ್ಯಾ (26) ಮೃತ ಮಹಿಳೆ. ಭಾನುವಾರ ಸಾಯಂಕಾಲ ತನ್ನ ಪತಿ ಹರೀಶ್ ಅವರ ಮನೆಯ ಕೊಠಡಿಯೊಂದರಲ್ಲಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದಿವ್ಯಾ ಹಾಗೂ ಹರೀಶ್ ದಂಪತಿಯು ವರ್ಷದ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಸಂಬಂಧವು ಇತ್ತೀಚಿನವರೆಗೂ ಅನ್ಯೋನ್ಯತೆಯಿಂದ ಕೂಡಿತ್ತು ಎಂದು ಮೃತ ದಿವ್ಯಾ ತಾಯಿ ತಿಳಿಸಿದ್ದಾರೆ.
ಹರೀಶ್ ಅವರು ಆಟೋ ರಿಕ್ಷಾದಲ್ಲಿ ದುಡಿಯುತ್ತಿದ್ದರೆ, ದಿವ್ಯಾ ಅವರು ಸುರತ್ಕಲ್ ನ ಮೆಡಿಕಲ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.