SULYA: ಅಪ್ಪ-ಮಗನ ಮೇಲೆ ಕಾಡಾನೆ ದಾಳಿ; ಓರ್ವ ಮೃತ್ಯು
Sunday, January 1, 2023
ಸುಳ್ಯ: ಅಪ್ಪ-ಮಗ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾಡಾನೆಯೊಂದು ದಾಳಿ ಮಾಡಿದ ಘಟನೆ ಶಿರಾಡಿಯಲ್ಲಿ ನಡೆದಿದೆ. ಘಟನೆಯಲ್ಲಿ ತಿಮ್ಮಪ್ಪ(45) ಮೃತಪಟ್ಟಿದ್ದು, ಮಗ ಶರಣ್(18) ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೃತಪಟ್ಟ ತಿಮ್ಮಪ್ಪ ಅವರು ಶಿರಾಡಿ ಜನತಾ ಕಾಲೋನಿ ನಿವಾಸಿ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಯಲ್ಲಿ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸ್ಫೋಟಕ ಬಳಸಿ ಬಂಡೆಯನ್ನ ಬ್ಲಾಸ್ಟ್ ಮಾಡುವ ಕಾರ್ಯ ನಡೆಸುತ್ತಿದೆ. ಈ ವೇಳೆ ಆ ಬ್ಲಾಸ್ಟ್ ನ ಶಬ್ಧಕ್ಕೆ ಆನೆ ಹೆದರಿ ಓಡಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪ್ಪ-ಮಗನ ಮೇಲೆ ದಾಳಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿ ಒಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಯಾವುದೇ ಸುರಕ್ಷಾ ವ್ಯವಸ್ಥೆ ಇಲ್ಲದೆ ಬಂಡೆ ಬ್ಲಾಸ್ಟ್ ಮಾಡುವ ಕಾರ್ಯಕ್ಕೆ ಇಳಿದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.