ಕೋವಿಡ್ ಸೋಂಕು ಮುಕ್ತವಾದ ದಕ್ಷಿಣ ಕನ್ನಡ ಜಿಲ್ಲೆ; ಶೂನ್ಯಕ್ಕಿಳಿದ ಸಕ್ರಿಯ ಪ್ರಕರಣ
ಮಂಗಳೂರು: ಕೋವಿಡ್ ರೂಪಾಂತರಿ ವೈರಸ್ ಮತ್ತೆ ಆತಂಕ ಸೃಷ್ಟಿಸುವ ಸಾಧ್ಯತೆ
ನಡುವೆ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಕೋವಿಡ್ ಮುಕ್ತ ಜಿಲ್ಲೆಯಾಗಿದೆ. ಗುರುವಾರ ಆರೋಗ್ಯ ಇಲಾಖೆ
ಬಿಡುಗಡೆಗೊಳಿಸಿದ ಕೋವಿಡ್ ಸ್ಥಿತಿ ಗತಿ ವರದಿಯಲ್ಲಿ ಸಕ್ರಿಯ ಪ್ರಕರಣ ಶೂನ್ಯಕ್ಕಿಳಿದಿದೆ.
ಕಳೆದ ಮೂರು ದಿನಗಳಿಂದ 2 ರಷ್ಟಿದ್ದ ಸಕ್ರಿಯ ಪ್ರಕರಣ, ಗುರುವಾರ ಆ
ಇಬ್ಬರು ವ್ಯಕ್ತಿಗಳು ಕೋವಿಡ್ ಸೋಂಕಿನಿಂದ ಗುಣಮುಖರಾಗುತ್ತಲೇ ಜಿಲ್ಲೆ ಸಂಪೂರ್ಣ ಕೋವಿಡ್ ಮುಕ್ತ ಜಿಲ್ಲೆಯಾಗಿ
ಬದಲಾಯಿತು.
ಕೋವಿಡ್ ಆರಂಭದ ಎರಡು ವರ್ಷದ ಬಳಿಕ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಕನ್ನಡ
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣ ಶೂನ್ಯಕ್ಕೆ ತಲುಪಿದೆ.
ಆದರೂ ಕೋವಿಡ್ ಆತಂಕವಿರುವುದರಿಂದ ಸಾರ್ವಜನಿಕರು ಮಾಸ್ಕ್ ಧರಿಸುವಿಕೆ,
ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ
ಬಹಳ ಮುಖ್ಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 1,37,191 ಮಂದಿ ಪಾಸಿಟಿವ್ ಒಳಪಟ್ಟರೆ, ಅದರಲ್ಲಿ 1,35,328 ಮಂದಿ ಗುಣಮುಖರಾದರೆ, 1862 ಮಂದಿ ಅಸುನೀಗಿದ್ದಾರೆ.