MANGALORE: ಮಂಗಳೂರಿನಲ್ಲಿ ಅಯ್ಯಪ್ಪ ಮಾಲಾಧಾರಿ ಬಾಲಕನಿಗೆ ಹಲ್ಲೆ!!
ಮಂಗಳೂರು: ಅಯ್ಯಪ್ಪ ಮಾಲಾಧಾರಿ ಬಾಲಕನೋರ್ವನಿಗೆ ಮುಸ್ಲಿಂ ವಿದ್ಯಾರ್ಥಿಗಳು ಹಲ್ಲೆ ಮಾಡಿರುವಂತ ಘಟನೆ ಮಂಗಳೂರಿನ ಕಪಿತಾನಿಯ ಶಾಲೆ ಬಳಿ ನಡೆದಿದೆ. ಬಾಲಕನನ್ನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಏಕಾಏಕಿ ಬಾಲಕನ ಮೇಲೆ ಎರಗಿ ಸುಖಾಸುಮ್ಮನೆ ಹೊಡೆದಿದ್ದಾರೆ ಎನ್ನಲಾಗಿದೆ. ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿಯ ಕೊರಳಿನಲ್ಲಿದ್ದ ಮಾಲೆಯನ್ನ ಕಿತ್ತೆಸೆದು ಬಳಿಕ ಹೊಡೆದು ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಬಾಲಕನಿಗೆ ಹಲ್ಲೆ; ಬಜರಂಗದಳ ಆಕ್ರೋಶ
ಇನ್ನು ಘಟನೆಯನ್ನ ಖಂಡಿಸಿರುವ ಬಜರಂಗದಳ, ಅಯ್ಯಪ್ಪ ಮಾಲಾಧಾರಿ ಬಾಲಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ರೆ ಅದು ಅನೈತಿಕ ಪೊಲೀಸ್ ಗಿರಿ ಅಲ್ವ? ಅದೇ ಬಜರಂಗದಳದ ಕಾರ್ಯಕರ್ತರು ಮಾಡಿದ್ರೆ ಮಾತ್ರನ ಅನೈತಿಕ ಪೊಲೀಸ್ ಗಿರಿ, ಇದೆಂತ ನ್ಯಾಯ. ಇನ್ನು ಮದರಸಗಳಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಹೊಡೆದಾಡುವಂತ ಪಾಠವನ್ನೇ ಕಲಿಸುತ್ತಾರಾ? ಒಂದು ವೇಳೆ ಅಂತಹ ಪಾಠವನ್ನೇ ಕಲಿಸುವುದಾದ್ರೆ, ನಾವು ಕೂಡ ಏನೂ ಕಮ್ಮಿ ಇಲ್ಲ ನಮಗೂ ಇಂತಹ ಘಟನೆಗಳಿಗೆ ಹೇಗೆ ಪಾಠ ಕಲಿಸಬೇಕೆಂಬುದು ಗೊತ್ತು ಅಂತ ಬಜರಂಗದಳ ಸಂಚಾಲಕ ಪುನೀತ್ ಅತ್ತಾವರ ಹೇಳಿಕೆಯನ್ನ ನೀಡಿದ್ದಾರೆ. ಕೂಡಲೇ ಪೊಲೀಸರು ಈ ಪ್ರಕರಣವನ್ನ ಕೈಗೆತ್ತಿಕೊಂಡು ಬೇಧಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.