MANGALORE: ವಾಮಂಜೂರಿನಲ್ಲಿ ಹಿಂದೂ ಕಾರ್ಯಕರ್ತನಿಗೆ ಜೀವ ಬೆದರಿಕೆ!?
Thursday, December 29, 2022
ಮಂಗಳೂರು: ಹಿಂದೂ ಕಾರ್ಯಕರ್ತನೋರ್ವನಿಗೆ ಅವ್ಯಾಚ್ಯವಾಗಿ ನಿಂದಿಸಿ ಜೀವಬೆದರಿಕೆಯೊಡ್ಡಿದ ಘಟನೆ ವಾಮಂಜೂರಿನಲ್ಲಿ ನಡೆದಿದೆ.
ಹಿಂದೂ ಕಾರ್ಯಕರ್ತ ಬಿಪಿನ್ ಎಂಬವರಿಗೆ ಬಿಜೆಪಿಯ ಕಾರ್ಪೋರೇಟರ್ ಹೇಮಲತಾ ರಘು ಅವರ ಪತಿ ರಘು ಸಾಲಿಯನ್ ಎಂಬವರು ಜೀವಬೆದರಿಕೆಯೊಡ್ಡಿದ್ದಾರೆ. ಇನ್ನು ಈ ಬಗ್ಗೆ ಬಿಪಿನ್ ಪತ್ನಿ ಹೇಮ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿನ್ನೆ ರಾತ್ರಿ ರೆಸ್ಟೋರೆಂಟ್‌ವೊಂದರಲ್ಲಿ ಬಿಪಿನ್ ಕುಳಿತಿದ್ದಾಗ ಏಕಾಏಕಿ ನುಗ್ಗಿದ ರಘು ಸಾಲಿಯಾನ್ ಅವ್ಯಾಚ್ಯವಾಗಿ ನಿಂದಿಸಿ ಜೀವಬೆದರಿಕೆಯೊಡ್ಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಯಾವ ಕಾರಣಕ್ಕೆ ಬಿಪಿನ್ ಗೆ ಜೀವಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬರಬೇಕಿದೆ.

